Connect with us

    FILM

    ಬಿಗ್ ಬಾಸ್ ವಿನ್ನರ್ ಅರೆಸ್ಟ್ ಮಾಡಿ ಜೈಲಿಗೆ ತಳ್ಳಿದ ಪೊಲೀಸರು

    ಮುಂಬೈ ಮಾರ್ಚ್ 27: ಹುಕ್ಕಾಬಾರ್ ಮೇಲೆ ನಡೆದ ದಾಳಿಯಲ್ಲಿ ಬಿಗ್ ಬಾಸ್ ವಿಜೇತ ಮುನಾವರ್ ಫಾರೂಕಿ ಸೇರಿದಂತೆ 14 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.


    ಮುಂಬೈ ನಲ್ಲಿ ಅಕ್ರಮವಾಗಿ ಹುಕ್ಕಾ ಪಾರ್ಲರ್ ನಡೆಸುತ್ತಿದ್ದ ಅರೋಪದ ಮೇಲೆ ದಾಳಿ ನಡೆಸಲಾಗಿದ್ದು, ₹4,400 ನಗದು ಹಾಗೂ ₹13,500 ಮೌಲ್ಯದ ಒಂಬತ್ತು ಹುಕ್ಕಾ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
    ಫಾರೂಕಿ ಸೇರಿದಂತೆ ಬಂಧಿತರ ವಿರುದ್ಧ ಸಿಗರೇಟ್‌ ಮತ್ತು ತಂಬಾಕು ಉತ್ಪನ್ನಗಳ ಮಸೂದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜತೆಗೆ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 32 ವರ್ಷದ ಫಾರೂಕಿ ಅವರು ಯೂಟ್ಯೂಬ್‌ನಲ್ಲಿ ಹಾಸ್ಯ ಕಲಾವಿದರಾಗಿ, ರ್‍ಯಾಪರ್‌ ಆಗಿ ಜನಪ್ರಿಯರಾಗಿದ್ದಾರೆ. 2021ರಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಫಾರೂಕಿ ಅವರು 35 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply