Connect with us

Entertainment

Bigg Boss ಸ್ಪರ್ಧಿ ಶೋಭಾ ಶೆಟ್ಟಿ ಜೈಲು ಪಾಲು…!!?

ಕಲರ್ಸ್ ಕನ್ನಡದಲ್ಲಿ ದಿನಕೊಂದು ಟ್ವಿಸ್ಟ್ ಕೊಡುತ್ತಿರುವ ಕನ್ನಡ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿ ಅವರು ಇದೀಗ ಜೈಲು ಪಾಲಾಗಿದ್ದಾರೆ.

ಕಲರ್ಸ್ ಕನ್ನಡದಲ್ಲಿ ದಿನಕೊಂದು ಟ್ವಿಸ್ಟ್ ಕೊಡುತ್ತಿರುವ ಕನ್ನಡ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿ ಅವರು ಇದೀಗ ಜೈಲು ಪಾಲಾಗಿದ್ದಾರೆ.

ಯಾರು ಉತ್ತಮ ಪ್ರದರ್ಶನ ನೀಡುವುದಿಲ್ಲವೋ ಅಂತವರನ್ನು  ಹುಡುಕಿ  ಕಳಪೆ ಪಟ್ಟ ನೀಡಿ ಜೈಲಿಗೆ ಹಾಕುವುದು ಬಿಗ್ ಬಾಸ್ ಮನೆಯ  ವಾಡಿಕೆ. ಅಂತೆಯೇ ಕಳಪೆ ಪ್ರದರ್ಶನಕ್ಕಾಕಿ   ಶೋಭಾ ಶೆಟ್ಟಿ(Shoba Shetty) ಜೈಲು ಪಾಲಾಗಿದ್ದಾರೆ.

ಕಳೆದ ವಾರ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಬಂದಿದ್ದ ರಜತ್ ಕಳಪೆ ಪ್ರದರ್ಶನಕ್ಕಾಗಿ ಜೈಲಿಗೆ ಹೋಗಿದ್ದರು. ಈ ವಾರ ಇನ್ನೊಬ್ಬ ವೈಲ್ಡ್ ಕಾರ್ಡ್ ಸ್ಪರ್ಧಿ ಶೋಭಾ ಶೆಟ್ಟಿ ಜೈಲಿಗೆ ಹೋಗಿದ್ದಾರೆ. ‘ಏನೇನೋ ಫೇಸ್ ಮಾಡಿರುವ ನನಗೆ 24 ಗಂಟೆ ಜೈಲು ಹೊಸದಲ್ಲ’ ಎಂದರಾದರೂ ಜೈಲಿಗೆ ಹೋಗುವ ಮುಂಚೆಯೇ ಕಣ್ಣೀರು ಹಾಕಿದರು.

ತೆಲುಗು ಬಿಗ್ ಬಾಸ್​ನಲ್ಲಿ ಶೋಭಾ ಶೆಟ್ಟಿ ಸಾಕಷ್ಟು ಆವೇಶದಿಂದ ಆಟ ಆಡಿ ಯಶಸ್ಸು ಗಳಿಸಿದ್ದರು. ಇದೀಗ ಅವರು ಕನ್ನಡ ಬಿಗ್ ಬಾಸ್​ಗೆ ಬಂದಿದ್ದು ಅಲ್ಲಿನ ಆಟ ನೋಡಿ ಅನೇಕರು  ಇದೇ ಆಟವನ್ನು ಇಲ್ಲಿಯೂ ಮುಂದುವರಿಸಬಹುದು ಎಂದುಕೊಂಡಿದ್ದರು. ಆದ್ರೆ ಇಲ್ಲಿ ನಡೆಯದೆ ಅವರು ಜೈಲು ಪಾಲಾಗಿದ್ದಾರೆ. ಇದು ಶೋಭಾಗೆ ಬೇಸರ ಮೂಡಿಸಿದೆ. ಆಡೋಕೆ ಅವಕಾಶ ಸಿಗಲಿಲ್ಲವಲ್ಲ ಎಂದು ಅವರು ಕಣ್ಣೀರು ಹಾಕಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *