Entertainment
Bigg Boss:ಆ ಕೆಟ್ಟ ವಿಡಿಯೋ ಬಗ್ಗೆ ಚೈತ್ರಾ ಕುಂದಾಪುರಳನ್ನು ತರಾಟೆಗೆ ತಗೊಂಡ ಕಿಚ್ಚ ಸುದೀಪ್..!
‘ನೀವು ಜಗದೀಶ್ಗೆ ಏನೆಂದು ಹೇಳಿದ್ರಿ? ನಿಮಗೆ ನೆನಪಿದೆಯಾ? ಈಗ ಹೇಳಿ ಅದನ್ನು ಬೇಕು ಅಂದ್ರೆ ವಿಡಿಯೋ ಹಾಕ್ತೀನಿ, ನಿಮ್ಮ ವಿಡಿಯೋ ತುಂಬ ಕೆಟ್ಟದಾಗಿದೆ. ಜಗದೀಶ್ ಹೇಳಿದ್ರೆ ಫ್ಲೋ ಅಲ್ಲ. ನೀವು ಹೇಳಿದ್ರೆ ಮಾತ್ರ ಫ್ಲೋನಾ?’ ಎಂದು ಕಿಚ್ಚ ಸುದೀಪ್ ಖಡಾಕ್ಕಾಗಿ ಪ್ರಶ್ನಿಸಿದ್ದಾರೆ.
ಬೆಂಗಳೂರು : ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದರು ಎಂಬ ಕಾರಣಕ್ಕೆ ಬಿಗ್ ಬಾಸ್ ಮನೆಯಿಂದ ಲಾಯರ್ ಜಗದೀಶ್ ಅವರನ್ನು ಹೊರಗೆ ಕಳುಹಿಸಲಾಯಿತು. ಅಲ್ಲದೆ ಜಗದೀಶ್ ಅವರನ್ನು ತಳ್ಳಿದರು ಎಂಬ ಕಾರಣದಿಂದ ರಂಜಿತ್ ರನ್ನೂ ಬಿಗ್ ಬಾಸ್ ಮನೆಯಿಂದ ಹೊರ ಹಾಕಿದ್ರು. ಇದೀಗ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಮನೆ ಒಳಗೆ ಇರುವವರು ಸರಿಯಾಗಿ ಇದ್ದಾರಾ? ಈ ಪ್ರಶ್ನೆಯನ್ನು ಕಿಚ್ಚ ಸುದೀಪ್ ಅವರು ಕೇಳಿದ್ದಾರೆ. ಚೈತ್ರಾ ಕುಂದಾಪುರ ಅವರು ಜಗದೀಶ್ ಬಗ್ಗೆ ಆಡಿದ ಅವಾಚ್ಯ ಪದಗಳನ್ನು ಸುದೀಪ್ ಖಡಾ ತುಂಡವಾಗಿ ಖಂಡಿಸಿದ್ದಾರೆ.
‘ನೀನು ಒಬ್ಬ ಅಪ್ಪನಿಗೆ ಹುಟ್ಟಿದ್ರೆ..’ ಎಂದು ಚೈತ್ರಾ ಕುಂದಾಪುರ ಅವರು ಹೇಳಿದ್ದರು. ಆ ವಿಚಾರವನ್ನು ಸುದೀಪ್ ಅವರು ಭಾನುವಾರದ ಸಂಚಿಕೆಯಲ್ಲಿ ಪ್ರಶ್ನಿಸಿದ್ದಾರೆ. ಈ ಬಗ್ಗೆ ಕೇಳುವಾಗ ಚೈತ್ರಾ ಅವರು ತಮ್ಮ ಈ ಹಿಂದಿನ ಮಾತನ್ನು ಮರೆತಂತೆ ನಟಿಸಿದರು. ತಾವು ಅಂಥ ಮಾತನ್ನು ಹೇಳಿಯೇ ಇಲ್ಲವೇನೋ ಎಂಬಂತೆ ಸೈಲೆಂಟ್ ಆಗಿದ್ದರು. ಆಗ ಸುದೀಪ್ ಅವರು ತಮ್ಮದೇ ಶೈಲಿಯಲ್ಲಿ ಚೈತ್ರಾಳ ಕ್ಲಾಸ್ ತೆಗೆದುಕೊಂಡರು.
‘ನೀವು ಜಗದೀಶ್ಗೆ ಏನೆಂದು ಹೇಳಿದ್ರಿ? ನಿಮಗೆ ನೆನಪಿದೆಯಾ? ಈಗ ಹೇಳಿ ಅದನ್ನು ಬೇಕು ಅಂದ್ರೆ ವಿಡಿಯೋ ಹಾಕ್ತೀನಿ, ನಿಮ್ಮ ವಿಡಿಯೋ ತುಂಬ ಕೆಟ್ಟದಾಗಿದೆ. ಜಗದೀಶ್ ಹೇಳಿದ್ರೆ ಫ್ಲೋ ಅಲ್ಲ. ನೀವು ಹೇಳಿದ್ರೆ ಮಾತ್ರ ಫ್ಲೋನಾ?’ ಎಂದು ಕಿಚ್ಚ ಸುದೀಪ್ ಖಡಾಕ್ಕಾಗಿ ಪ್ರಶ್ನಿಸಿದ್ದಾರೆ. ‘ಚೈತ್ರಾ ಹೇಳಿದ ಮಾತು ನಿಮಗೆ ಸರಿ ಎನಿಸುತ್ತಾ ಗೌತಮಿ ಅವರೇ? ತಲೆ ಎತ್ತಿ ಮಾತನಾಡಿ ಭವ್ಯಾ? ವಾಯ್ಸ್ ಬರಲಿ. ಅದೇ ಗಂಡ್ಮಕ್ಕಳಲ್ಲಿ ಯಾರಾದರೂ ಒಬ್ಬರು ಬಂದು ಚೈತ್ರಾ ಹೇಳಿದ ಮಾತು ಹೇಳಿದ್ರೆ ನೀವು ಸುಮ್ಮನೆ ಇರುತ್ತಿದ್ರಾ?’ ಎಂದು ಬಿಗ್ ಬಾಸ್ ಮನೆಯಲ್ಲಿದ್ದ ಹೆಣ್ಣು ಮಕ್ಕಳಿಗೆ ಸುದೀಪ್ ಪ್ರಶ್ನಿಸಿದ್ದಾರೆ. ಉತ್ತರ ಕೊಡಲು ಸಾಧ್ಯವಾಗದೇ ಎಲ್ಲ ಮಹಿಳಾ ಸ್ಪರ್ಧಿಗಳು ಮೌನಕ್ಕೆ ಶರಣಾಗಿದ್ದರು.ಇಷ್ಟೆಲ್ಲ ಮಾತುಕಥೆ ನಡುವೆ ಚೈತ್ರಾ ಕುಂದಾಪುರ ಅವರು ಸಮರ್ಥನೆ ಮಾಡಿಕೊಳ್ಳಲು ಪ್ರಯತ್ನಿಸಿದರು. ‘ನಿಮ್ಮ ಉತ್ತರ ಚೆನ್ನಾಗಿದ್ದರೆ ಮಾತ್ರ ಮಾತನಾಡಿ. ಇಲ್ಲ ಅಂದ್ರೆ ಸುಮ್ಮಿನಿರಿ. ಇಲ್ಲದಿದ್ರೆ ಇನ್ನೂ ಕೆಳಗೆ ಹೋಗುತ್ತೀರಿ’ ಎಂದು ಸುದೀಪ್ ಅವರು ಖಡಕ್ ವಾರ್ನಿಂಗ್ ಕೊಟ್ಟರು.
You must be logged in to post a comment Login