Connect with us

    FILM

    ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದು ಟ್ರಿಮ್ಮರ್ ಚಾರ್ಜರ್….!!

    ಬೆಂಗಳೂರು ಡಿಸೆಂಬರ್ 23: ಬಿಗ್ ಬಾಸ್ ಮನೆಯ ಮೊಬೈಲ್ ಚಾರ್ಜರ್ ಪೋಟೋ ಒಂದು ವೈರಲ್ ಆಗಿದ್ದು, ಇದೀಗ ವೈರಲ್ ಪೋಟೋ ಬಗ್ಗೆ ಸ್ಪತಃ ಸ್ಪರ್ಧಿಗಳಿಂದಲೇ ಸ್ಪಷ್ಟನೆ ಸಿಕ್ಕಿದೆ.


    ಸಾಮಾಜಿಕ ಜಾಲತಾಣದಲ್ಲಿ ಬಿಗ್​ಬಾಸ್​ ಮನೆಯಲ್ಲಿದ್ದ ಒಂದು ವಸ್ತು ಫೋಟೋವೊಂದು ಸಖತ್​ ವೈರಲ್​ ಆಗಿತ್ತು. ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​​ ಮನೆಯಲ್ಲಿ ಮೊಬೈಲ್ ಬಳಕೆ ಮಾಡಲಾಗುತ್ತಿದ್ಯಾ ಎಂಬ ಪ್ರಶ್ನೆ ವೀಕ್ಷಕರಲ್ಲಿ ಎದುರಾಗಿತ್ತು.
    ಬಿಗ್​ಬಾಸ್ ಆ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ವಾರದ ಕತೆ ಬಗ್ಗೆ ಸ್ಪರ್ಧಿಗಳ ಜೊತೆ ಮಾತಾಡಲು ಬಿಗ್​ಬಾಸ್​​ಗೆ ಸೀಸನ್ 04ರ ವಿನ್ನರ್ ಆಗಿ ಹೊರ ಹೊಮ್ಮಿದ ಶೃತಿ ಅವರು ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು.

    ಆಗ ಖುದ್ದು ನಟಿ ಶೃತಿ ಅವರೇ ಈ ವಿಚಾರದ ಬಗ್ಗೆ ಸ್ಪರ್ಧಿಗಳ ಮುಂದೆ ಪ್ರಶ್ನೆ ಮಾಡಿದ್ದಾರೆ. ಎಲ್ಲರಿಗೂ ಒಂದು ಪ್ರಶ್ನೆ ಇದೆ. ನಿಮೆಲ್ಲರೂ ಬಿಗ್​ಬಾಸ್​ ಮನೆಯಲ್ಲಿ ಮೊಬೈಲ್​ ಯೂಸ್​ ಮಾಡ್ತಾ ಇದ್ದೀರಾ? ವೀಕ್ಷಕರಿಂದ ಬಿಗ್​ಬಾಸ್​ ಮೇಲೆ ಸಾಕಷ್ಟು ಪ್ರಶ್ನೆಗಳು ಇರುತ್ತವೆ. ಹಾಗಾಗಿ ಈ ಪ್ರಶ್ನೆ ಎದುರಾಗಿದೆ. ಬಿಗ್​​ಬಾಸ್​ ನಿಮ್ಮ ಹತ್ತಿರ ಇರುವ ಫೋಟೋವನ್ನು ನಮ್ಮ ಸ್ಪರ್ಧಿಗಳಿಗೆ ತೋರಿಸಿ ಎಂದು ಹೇಳುತ್ತಾರೆ.

    ಆಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಫೋಟೋ ಟಿವಿಯಲ್ಲಿ ಹಾಕುತ್ತಾರೆ. ಇದನ್ನು ನೋಡಿದ ಸ್ಪರ್ಧಿಗಳು ಒಂದು ಕ್ಷಣ ಶಾಕ್​ ಆಗುತ್ತಾರೆ. ಬಳಿಕ ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಆಗ ಸ್ಪರ್ಧಿಗಳು ಫೋನ್ ಬಳಸುತ್ತಿಲ್ಲ. ಅದರ ಬದಲಿಗೆ ಫೋನ್ ಚಾರ್ಜರ್​ ಬಳಸುತ್ತಿದ್ದೇವೆ. ಅದು ವಿನಯ್ ಹಾಗೂ ಮೈಕಲ್ ಯೂಸ್ ಮಾಡೋ ಟ್ರಿಮರ್ ಉಪಕರಣ ಆಗಿದ್ದು. ವೀಕ್ಷಕರಿಗೆ ತಮ್ಮ ಬಳಿಯಿದ್ದ ಚಾರ್ಜರ್​ ಬಗ್ಗೆ ಇಬ್ಬರು ಕ್ಲಾರಿಫಿಕೇಷನ್ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಆಚೆ ನಡೆದಿದ್ದ ಈ ವೈರಲ್ ವಿಷಯಕ್ಕೆ ಮನೆಯ ಸದಸ್ಯರು ಫುಲ್ ಸ್ಟಾಪ್ ಇಟ್ಟಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply