Connect with us

FILM

‘ಬಿಗ್ ಬಾಸ್’ ಸೀಸನ್​ 8, ವರ್ಷನ್​ 2 ಬುಧವಾರದಿಂದ ಪ್ರಾರಂಭ .

ಬೆಂಗಳೂರು, ಜೂನ್ 21:  ‘ಬಿಗ್ ಬಾಸ್’ ಸೀಸನ್ ಎಂಟರ ವರ್ಷನ್ 2 ಇದೇ ಬುಧವಾರದಿಂದ (ಜೂನ್​ 23) ಕಾರ್ಯಕ್ರಮ ಮತ್ತೆ ಪ್ರಾರಂಭವಾಗಲಿದೆ.

ಇದಕ್ಕೂ ಮೊದಲು, ಜೂನ್ 20ರ ಭಾನವಾರದಂದು ಕಾರ್ಯಕ್ರಮ ಪ್ರಾರಂಭವಾಗಬೇಕಿತ್ತು. ಸುದೀಪ್ ಸ್ಪರ್ಧಿಗಳನ್ನು ಬರಮಾಡಿಕೊಂಡು, ಮನೆಯೊಳಕ್ಕೆ ಕಳುಹಿಸಬೇಕಿತ್ತು. ಆದರೆ, ಇಂದಿನಿಂದ ಲಾಕ್‌ಡೌನ್ ತೆರವಾಗಿರುವುದರಿಂದ, ಚಿತ್ರೀಕರಣ ಇಂದಿನಿಂದ ಪ್ರಾರಂಭವಾಗಬೇಕು. ಇವತ್ತೇ ಚಿತ್ರೀಕರಣ ಶುರು ಮಾಡಿ, ಇವತ್ತೇ ಪ್ರಸಾರ ಮಾಡುವುದು ಕಷ್ಟವಾಗುವುದರಿಂದ, ಪ್ರಸಾರವನ್ನು ಒಂದೆರೆಡು ದಿನ ಮುಂದೂಡಲಾಗುತ್ತದೆ ಮತ್ತು ಬುಧವಾರ ಅಥವಾ ಗುರುವಾರ ಕಾರ್ಯಕ್ರಮ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಈಗ ಬುಧವಾರ ಸಂಜೆ 6.30ಕ್ಕೆ ಕಾರ್ಯಕ್ರಮ ಪ್ರಾರಂಭವಾಗುತ್ತಿರುವ ಪ್ರಕಟಣೆ ಚಾನಲ್​ನ ಸೋಷಿಯಲ್​ ಮೀಡಿಯಾ ಖಾತೆಗಳಿಂದಲೇ ಹೊರಬಿದ್ದಿದೆ.

ಈಗಾಗಲೇ ಸ್ಪರ್ಧಿಗಳನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದ್ದು, ಇಂದು ರಾತ್ರಿ ಅಥವಾ ನಾಳೆ ಬೆಳಿಗ್ಗೆ ಎಲ್ಲರೂ ‘ಬಿಗ್ ಬಾಸ್’ ಮನೆಗೆ ಎಂಟ್ರಿ ಕೊಡಲಿದ್ದಾರೆ. ಕಳೆದ ತಿಂಗಳು ಲಾಕ್‌ಡೌನ್‌ನಿಂದ ಕಾರ್ಯಕ್ರಮ ನಿಂತಾಗ, 72 ದಿನಗಳಾಗಿದ್ದವು. 11 ಸ್ಪರ್ಧಿಗಳು ಕಾರ್ಯಕ್ರಮದಲ್ಲಿದ್ದರು.

ಇದೀಗ ಸ್ಪರ್ಧಿಗಳಾದ ಶುಭಾ ಪೂಂಜ, ನಿಧಿ ಸುಬ್ಬಯ್ಯ, ವೈಷ್ಣವಿ, ಪ್ರಶಾಂತ್ ಸಂಬರಗಿ, ಮಂಜು, ಶಮಂತ್, ಚಕ್ರವರ್ತಿ ಚಂದ್ರಚೂಡ್, ಅರವಿಂದ್, ದಿವ್ಯ ಸುರೇಶ್, ರಘು ಗೌಡ ಮತ್ತು ಪ್ರಿಯಾಂಕಾ ತಿಮ್ಮೇಶ್, ‘ಬಿಗ್ ಬಾಸ್’ ಮನೆಗೆ ವಾಪಸ್ಸಾಗಲಿದ್ದಾರೆ. ಇನ್ನು, ಅನಾರೋಗ್ಯದಿಂದ ಕಾರ್ಯಕ್ರಮ ನಿಲ್ಲುವುದಕ್ಕೆ ಕೆಲವು ದಿನಗಳ ಮುಂಚೆ ಮನೆಯಿಂದ ನಿರ್ಗಮಿಸಿದ್ದ ದಿವ್ಯ ಉರುಡುಗ ಸಹ ವರ್ಷನ್ 2ನಲ್ಲಿ ಭಾಗವಹಿಸುತ್ತಿದ್ದಾರೆ.