ದನಕಳ್ಳರನ್ನು ಹಿಡಿಲು ಹೋದ ಪೊಲೀಸರಿಗೆ ಶಾಕ್….!!

ಪುತ್ತೂರು ಮೇ.21: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅತೀ‌ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ವಿಟ್ಲ ಪೋಲೀಸರು ದಾಳಿ ನಡೆಸಿ ಒರ್ವ ಆರೋಪಿಯನ್ನು ಬಂಧಿಸಿದ್ದಾರೆ. ಜಿಲ್ಲೆಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಅಕ್ರಮ ಕಸಾಯಿಖಾನೆಗೆ ದಾಳಿ ನಡೆದಿರುವುದು ಇದೇ ಮೊದಲ ಬಾರಿಯಾಗಿದ್ದು, ದಾಳಿ ನಡೆಸಿದ ಪೋಲೀಸರಿಗೆ ಅಲ್ಲಿನ ವ್ಯವಸ್ಥೆ ಕಂಡು ಶಾಕ್ ಆಗಿದೆ.

ಸುಮಾರು 200 ಕ್ಕೂ ಮಿಕ್ಕಿದ ದನದ ಚರ್ಮಗಳು, ವಧೆ ಮಾಡಲು ತಂದಿಟ್ಟಿದ್ದ ಏಳು ಗೋವುಗಳು, ಗೋ ಸಾಗಾಟಕ್ಕೆ ಬಳಸುತ್ತಿದ್ದ ವಾಹನಗಳನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದಕ್ಷಿಣಕನ್ನಡ ಹಾಗೂ ಕೇರಳ ಗಡಿಭಾಗವಾದ ಸಾಲೆತ್ತೂರಿನ ಐತಕುಮೇರು ಎಂಬಲ್ಲಿ ಮೊಯ್ದೀನ್ ಕುಂಞ ಎಂಬಾತನ ತೋಟದಲ್ಲಿ ಈ ಅಕ್ರಮ‌ ಕಸಾಯಿಖಾನೆ ನಡೆಯುತ್ತಿದ್ದ ಕುರಿತು ಸುಳಿವು ಪಡೆದ ವಿಟ್ಲ ಎಸ್.ಐ ವಿನೋದ್ .ಕೆ.ಎಸ್ ನೇತ್ರತ್ವದ ತಂಡ ದಾಳಿ ನಡೆಸಿದೆ.

ಸ್ಥಳದಲ್ಲಿ ಕಸಾಯಿಖಾನೆ ನಡೆಸುತ್ತಿದ್ದ ಪ್ರಮುಖ ಆರೋಪಿ ಕೊಳ್ನಾಡು‌ ಕಟ್ಟತ್ತಿಲ ನಿವಾಸಿ ಹ್ಯಾರೀಸ್ ನನ್ನು ಪೋಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಹಲವು ಕಡೆಗಳಿಂದ ಗೋವುಗಳನ್ನು ಕದ್ದು ತಂದು‌ ಇಲ್ಲಿ ವಧೆ ಮಾಡಲಾಗುತ್ತಿತ್ತಲ್ಲದೆ, ಮಾಂಸವನ್ನು ಕೇರಳ ಹಾಗೂ ಇಯರ ಭಾಗಗಳಿಗೆ ಸಾಗಾಟ ಮಾಡಲಾಗುತ್ತಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ವಿಟ್ಲ ಪೋಲೀಯಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸುತ್ತಿದ್ದಾರೆ.