ಹೆಬ್ರಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ತಂದೆ ಮಗಳ ಮೇಲೆ ಕ್ರಿಮಿನಲ್ ಕೇಸ್

ಉಡುಪಿ ಮೇ.22: ಕ್ವಾರಂಟೈನ್ ನಲ್ಲಿರಲು ಸೂಚನೆ ನೀಡಿದ್ದರೂ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿದ ತಂದೆ ಮಗಳ ಮೇಲೆ ಹೆಬ್ರಿ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.

ಹೆಬ್ರಿಯ ವಿಜಯಲಕ್ಷ್ಮಿ ಲಾಡ್ಜ್ ನಲ್ಲಿ ಉಡುಪಿ ಜಿಲ್ಲಾಡಳಿತ ಹೊರರಾಜ್ಯಗಳಿಂದ ಆಗಮಿಸಿದ ಕೆಲವು ಮಂದಿಯನ್ನು ಕ್ವಾರಂಟೈನ್ ನಲ್ಲಿಟ್ಟಿತ್ತು. ಈ ನಡುವೆ ಲಾಡ್ಜ್ ನಲ್ಲಿದ್ದ ಇಬ್ಬರು ವ್ಯಕ್ತಿಗಳಿಗೆ ಕೊರೊನಾ ಸೊಂಕು ದೃಢಪಟ್ಟಿದೆ. ಈ ಹಿನ್ನಲೆ ಜಿಲ್ಲಾಡಳಿತ ಲಾಡ್ಜ್ ನ ಮೇಲ್ವಿಚಾರಕ ವಿಠಲ ಹೆಗ್ಡೆ ಮತ್ತು ಮಗಳು ತೃಪ್ತಿ ಹೆಗ್ಡೆ ಗೆ ಲಾಡ್ಜ್ ನಲ್ಲಿ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಿತ್ತು.

ಆದರೆ ತಂದೆ ಮಗಳು ಮಗಳು ಜಿಲ್ಲಾಧಿಕಾರಿಗಳ ಆದೇಶ ಮೀರಿ ಸೀತಾನದಿ ಸಮೀಪ ಇರುವ ತಮ್ಮ ಮನೆಗೆ ತೆರಳಿದ್ದಲ್ಲದೆ ಪರಿಸರದಲ್ಲಿ ಓಡಾಡಿಕೊಂಡಿದ್ದರು. ಆರೋಗ್ಯ ಅಧಿಕಾರಿಗಳ ಹೊರಗಡೆ ತಿರುಗಾಡದೇ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಿದರು ಕ್ಯಾರೆ ಅನ್ನದೆ ಸುತ್ತಮುತ್ತಲ ಪರಿಸರದಲ್ಲಿ ತಿರುಗಾಟ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಈ ಹಿನ್ನಲೆ ಅಧಿಕಾರಿಗಳು ಕೊರೊನಾ ಸೊಂಕು ಹರಡುವ ಸಾಧ್ಯತೆ ಹಿನ್ನಲೆ ಹಾಗೂ ದಿಗ್ಬಂಧನ ನಿಯಮ ಉಲ್ಲಂಘಿಸಿದ ತಂದೆ-ಮಗಳ ಮೇಲೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.