Connect with us

    FILM

    ವೇಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿ ಬಿದ್ದ ಮತ್ತೋರ್ವ ನಟಿ -: ಮುಂಬೈ ಪೊಲೀಸರ ಕಾರ್ಯಾಚರಣೆ

    ಮುಂಬೈ ಎಪ್ರಿಲ್ 22: ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಮತ್ತೊಂದು ನಟಿಯಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಒಂದೇ ವಾರದೊಳಗೆ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಇಬ್ಬರು ನಟಿಯರ ಬಂಧನವಾಗಿದೆ.


    ಬಂಧಿತ ನಟಿಯನ್ನು ಭೋಜಪುರಿ ನಟಿ ಸುಮನ್ ಕುಮಾರಿ ಎಂದು ಗುರುತಿಸಲಾಗಿದ್ದು, ಮುಂಬೈನ ಪೊಲೀಸ್ ಸೋಷಿಯಲ್ ಸರ್ವೀಸ್ ಶಾಖೆಯ ಅಧಿಕಾರಿಗಳು ಈಕೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಮುಂಬೈನ ಗೋರೆಗಾಂವ್ ನ ಹೋಟೆಲ್ ವೊಂದರಲ್ಲಿ ಈ ನಟಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ತಮಗೆ ಖಚಿತವಾದ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಹೋಟೆಲ್ ಮೇಲೆ ದಾಳಿ ಮಾಡಿದ ಪೊಲೀಸರು ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ. ದಂಧೆಯ ಮುಖ್ಯ ಆರೋಪಿ ನಟಿ ಸುಮನ್ ಕುಮಾರಿಯನ್ನು ವಶಕ್ಕೆ ಪಡೆದಿದ್ದಾರೆ. ಸಿನಿ ಜಗತ್ತಿಗೆ ಕನಸುಹೊತ್ತು ಬರುವ ನಟಿಯರೇ ಈಕೆಯ ಟಾರ್ಗೆಟ್ ಎಂದು ಹೇಳಲಾಗುತ್ತಿದ್ದು, ಒಂದು ಹುಡುಗಿಗೆ ಐವತ್ತು ಸಾವಿರದಿಂದ ಎಂಬತ್ತು ಸಾವಿರ ತನಕ ಚಾರ್ಜ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.

    ಪಂಜಾಬಿ, ಭೋಜಪುರಿ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ಸುಮನ್ ಕುಮಾರಿ ನಟಿಸಿದ್ದು, ಹಲವು ಆಲ್ಬಂಗಳಲ್ಲೂ ಕಾಣಿಸಿಕೊಂಡಿದ್ದಾರೆ. ಲೈಲಾ ಮಜ್ನು, ಬೇಟಾ ದಸ್ ನಂಬರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಯುವಕನೊಬ್ಬನ ಸಹಾಯ ಪಡೆದುಕೊಂಡು ಈಕೆ ಅಡ್ಡದಾರಿ ಹಿಡಿದ್ದರು ಎಂದು ಹೇಳಲಾಗುತ್ತಿದೆ. ಆ ಯುವಕ ಸದ್ಯ ನಾಪತ್ತೆಯಾಗಿದ್ದಾನೆ.

    Share Information
    Advertisement
    Click to comment

    You must be logged in to post a comment Login

    Leave a Reply