Connect with us

DAKSHINA KANNADA

ಭಿಕ್ಷಾಂದೇಹಿ ಆಂದೋಲನ ಯಶಸ್ವಿ ಹರಿದು ಬಂದ ನೆರವು

ಮಂಗಳೂರು ಅಗಸ್ಟ್ 19: ಕಲ್ಲಡ್ಕ ಶ್ರೀರಾಮ ಶಾಲೆಗೆ ರಾಜ್ಯ ಸರಕಾರ ಮಧ್ಯಾಹ್ನ ಅನ್ನದಾನದ ಅನುದಾನ ಸ್ಥಗಿತಗೊಳಿಸಿದ ವಿರುದ್ಧ ಮುಂಬಯಿಯ ಮಹೇಶ್ ವಿಕ್ರಂ ಹೆಗ್ಡೆ ಮತ್ತು ವಿವೇಕ್ ಶೆಟ್ಟಿ ಆರಂಭಿಸಿದ ಭಿಕ್ಷಾಂದೇಹಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಆಂದೋಲನ ಆರಂಭಿಸಿದ ವಾರದಲ್ಲೇ ಕಲ್ಲಡ್ಕ ಶಾಲೆಗೆ 11.54 ಲಕ್ಷ ರೂಪಾಯಿ ಅನುದಾನ ಮತ್ತು 4800 ಕೆಜಿ ಅಕ್ಕಿ ಸಂಗ್ರಹವಾಗಿದೆ.

ಮುಂಬೈನ ಪೋಸ್ಟ್ ಕಾರ್ಡ್ ಡಾಟ್ ಕಾಮ್ ವೆಬ್ ಸೈಟ್ ಮೂಲಕ ಆಗಸ್ಟ್ 10 ರಂದು ಆಂದೋಲನ ಆರಂಭಿಸಲಾಗಿತ್ತು. ರಷ್ಯಾ, ಯುಎಸ್ಎ, ಗಲ್ಫ್ ಮೊದಲೇ ಕಡೆಯಿಂದ ಸ್ಪಂದನೆ ಸಿಕ್ಕಿದೆ. ಗ್ರಾಮ ಮಟ್ಟದಲ್ಲೂ ಮುಷ್ಟಿ ಅಕ್ಕಿ ಕೊಡುವ ಬಗ್ಗೆ ಚಿಂತನೆ ನಡೆಯುತ್ತಿದ್ದು, ರಾಜ್ಯಕ್ಕೆ ಪ್ರತಿನಿಧಿಗಳು ಇದಕ್ಕೆ ಬೆಂಬಲ ನೀಡಿದ್ದಾರೆ.

ಉಚಿತ ಊಟ ಕೊಟ್ಟು ಶಿಕ್ಷಣ ನೀಡುವ ಬಗ್ಗೆ 36 ವರ್ಷದ ಹಿಂದೆ ಡಾ. ಕಲ್ಲಡ್ಕ್ ಪ್ರಭಾಕರ್ ಭಟ್ ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ ಎಂದರು, ಮನೆಮನೆ ಭೇಟಿಯಾದರೂ ಮಕ್ಕಳಿಗೆ ಮಧ್ಯಾಹ್ನದ ಊಟ ಹಾಕಲು ಸಿದ್ಧವಾಗಲು ಕಾರ್ಯಕರ್ತರು ಸ್ಪಂದಿಸುತ್ತಿದ್ದಾರೆ ಎಂದು ಕಲ್ಲಡ್ಕ ಶ್ರೀರಾಮ ಶಾಲೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಮನೋಜ್ ಹೇಳಿದ್ದಾರೆ.

ಸಂಸ್ಥೆಯ 3016 ವಿದ್ಯಾರ್ಥಿಗಳು ಮಧ್ಯಾಹ್ನದ ಊಟದಿಂದ ವಂಚಿತರಾಗಲು ಬಿಡುವುದಿಲ್ಲ ಮುಂದಿನ 8 ತಿಂಗಳಿಗೆ ಸಾಕಾಗುವಷ್ಟು ಸುಮಾರು 80 ಲಕ್ಷ ರೂಪಾಯಿ ಹಣ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎನ್ನುತ್ತಾರೆ ಭಿಕ್ಷಾಂದೇಹಿ ಅಭಿಯಾನದ ರೂವಾರಿ ಮಹೇಶ್ ವಿಕ್ರಮ್ ಹೆಗ್ಡೆ .

ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ ಸಂಸದೆ ಶೋಭಾ ಕರಂದ್ಲಾಜೆಯವರು ಮನೆಮನೆಗೆ ಭೇಟಿ ನೀಡಿ ಭಿಕ್ಷಾಟನೆ ಮೂಲಕ ಅಕ್ಕಿ ಸಂಗ್ರಹಿಸಿ ಕಲ್ಲಡ್ಕ ಶಾಲೆಗೆ ನೀಡಿದ್ದನ್ನು ಸ್ಮರಿಸಬಹುದು. ಇದು ರಾಜಕೀಯ ಮೇಲಾಟಕ್ಕೆ ಕಾರಣವಾಗಿದ್ದು ಪರ ವಿರೋಧ ಮಾತುಗಳು ಕೇಳಿ ಬಂದಿವೆ.

Facebook Comments

comments