ನಟಿಯಾಗಿ, ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಭಾವನಾ ಸಿಂಗಲ್ ಜೀವನ ನಡೆಸುತ್ತಿದ್ದಾರೆ. ಮುಂದುವರೆದ ವೈದ್ಯಕೀಯ ತಂತ್ರಜ್ಞಾನದಲ್ಲೀಗ ಪುರುಷನ ದೈಹಿಕ ಸಂಪರ್ಕ ಇಲ್ಲದೆ ಈಗ ತಾಯಿಯಾಗಬಹುದು. ಹಾಗೆಯೇ ಭಾವನಾ ತಾಯಿಯಾಗುತ್ತಿದ್ದು ಅವರಿಗೀಗ ವಯಸ್ಸು 40ರ ಆಸುಪಾಸು.
ಭರತನಾಟ್ಯ ಕಲಾವಿದೆಯಾಗಿ ಫಿಟ್ ಆಗಿರುವ ಭಾವನಾ ಇದೀಗ ಮಗು ಹೆರಲು ಸಿದ್ಧರಾಗಿದ್ದು, ಅವಳಿ ಮಕ್ಕಳನ್ನು ಪಡೆಯುತ್ತಿದ್ದಾರೆ. ಶೀಘ್ರದಲ್ಲೇ ಅವರು ತಾಯಿಯಾಗಲಿದ್ದಾರೆ.
