Connect with us

LATEST NEWS

ಪ್ರಧಾನಿ ಮೋದಿ ಪಕೋಡಾ ಹೇಳಿಕೆ ಸತ್ಯ ಎಂದು ತೋರಿಸಿದ ಮಂಗಳೂರಿನ ಸಾಧಕ

ಪಕೋಡಾ ಮಾರಿ ಜೀವನ ಕಟ್ಟಿಕೊಳ್ಳಬಹುದು ಎಂದು ತೋರಿಸಿದ ಸಾಧಕ

ಮಂಗಳೂರು ಫೆಬ್ರವರಿ 10: ಪ್ರಧಾನಿ ನರೇಂದ್ರ ಮೋದಿ ಅವರು ಪಕೋಡಾ ಮಾರಿ ಜೀವನ ಕಟ್ಟಿಕೊಳ್ಳಬಹುದು ಎಂಬ ಹೇಳಿಕೆ ವಿರುದ್ದ ವಿರೋಧ ಪಕ್ಷಗಳು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಮೋದಿ ಅವರ ಹೇಳಿಕೆ ವಿರೋಧಿಸಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಬೀದಿಗಿಳಿದು ಪಕೋಡಾ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ನಡುವೆ ಮೋದಿ ಅವರ ಹೇಳಿಕೆಗೆ ಪೂರಕ ಎಂಬಂತೆ ಪಕೋಡಾ ಮಾರಿ ಜೀವನದ ಉತ್ತುಂಗಕ್ಕೇರಿದವರು ಹಲವಾರು ಜನರ ನಿದರ್ಶನ ನಮ್ಮ ಮುಂದಿದೆ. ನಿರುದ್ಯೋಗಿಯಾಗಿ ಇರುವುದಕ್ಕಿಂತ ಪಕೋಡಾ ಮಾರಿಯಾದರೂ ಜೀವನ ನಡೆಸಬಹುದೆಂದು ತೋರಿಸಿಕೊಟ್ಟಿದ್ದಾರೆ.
ಪಕೋಡಾ ಮಾರಾಟ ಮಾಡಿ ಸ್ವಾಭಿಮಾನಿ ಬದುಕು ನಡೆಸುತ್ತಿರುವ ಉದಾಹರಣೆ ಮಂಗಳೂರಿನಲ್ಲಿದೆ. ಮಂಗಳೂರಿನ ರಥ ಬೀದಿಯಲ್ಲಿರುವ ಬಳ್ಳಿ ಮಾಮ್ ಎಂದೇ ಪರಿಚಿತರಾಗಿರುವ ರಾಜೇಶ್ ಬಾಳಿಗಾ ಪಕೋಡಾ ಮಾರಾಟದಿಂದ ಉತ್ತಮ ಜೀವನ ನಡೆಸುತ್ತಿರುವುದಕ್ಕೆ ಒಂದು ಜೀವಂತ ಉದಾರಹಣೆಯಾಗಿದ್ದಾರೆ.

ಪದವಿ ಶಿಕ್ಷಣವನ್ನು ಅರ್ಧದಲ್ಲೆ ನಿಲ್ಲಿಸಿರುವ ರಾಜೇಶ್ ಬಾಳಿಗಾ ನಡುವಿನಲ್ಲೇ ನಿಲ್ಲಿಸಿ ಕುಟುಂಬ ನಿರ್ವಹಣೆಗೆ ಉದ್ಯೋಗ ಅರಸುವ ಅನಿವಾರ್ಯತೆ ಎದುರಾಯಿತು. ಆದರೆ ಕೈಯಲ್ಲಿ ಬಿಡಿಗಾಸೂ ಇರಲಿಲ್ಲ. ಹತಾಷರಾಗಿ ಕುಳಿತು ಕೊಳ್ಳದ ರಾಜೇಶ್ ಬಾಳಿಗ ಮಂಗಳೂರಿನ ಹೃದಯ ಭಾಗದಲ್ಲಿರುವ ರಥ ಬೀದಿಯಲ್ಲಿ 1993 ರಲ್ಲಿ ಪುಟ್ಟದೊಂದು ಪಕೋಡಾ ವ್ಯಾಪಾರ ಆರಂಭಿಸಿದರು.

ಜೀವನ ನಿರ್ವಹಣೆಗಾಗಿ ಶುರು ಮಾಡಿದ ಈ ಪಕೋಡಾ ವ್ಯಾಪಾರ ಈಗ ಉತ್ತಮವಾಗಿ ನಡೆಯುತ್ತಿದೆ. ಈ ಹಿಂದೆ ಎರಡು ರೀತಿಯ ಪಕೋಡಾ ತಯಾರಿಸಿ ಮಾರಾಟ ಮಾಡುತ್ತಿದ ಬಳ್ಳಿ ಮಾಮ್ ಈಗ ಹಲವಾರು ಬಗೆಯ ಪಕೋಡಾ ಸೇರಿದಂತೆ ಇನ್ನಿತರ ತಿನಿಸುಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಕಳೆದ 24 ವರ್ಷಗಳಿಂದ ರಾಜೇಶ್ ಮಾಮ್ ಪಕೋಡಾ ವ್ಯಾಪಾರ ನಡೆಸುತ್ತಿದ್ದಾರೆ.

ಪ್ರತಿನಿತ್ಯ ಇವರ ವ್ಯಾಪಾರ ಮುಂಜಾನೆ 11 ಗಂಟೆ ಯಿಂದ ಸಂಜೆ 7 ವರೆಗೆ. ಬಾಳಿಗಾ ಅವರ ದಿನ ನಿತ್ಯದ ಗಳಿಕೆ ಕನಿಷ್ಟ 30 ರಿಂದ 40 ಸಾವಿರ ರೂಪಾಯಿ. ಅಂಗಡಿಯಲ್ಲಿ 8 ಜನರಿಗೆ ಉದ್ಯೋಗ ನೀಡಿರುವ ರಾಜೇಶ್ ಬಾಳಿಗಾ ಈಗಲೂ ಪಕೋಡಾ ಎಣ್ಣೆಗೆ ಬಿಡುವುದು ಬಳ್ಳಿ ಮಾಮ್ ಮುಂದುವರೆಸಿದ್ದಾರೆ. ರಥಭೀದಿಯ ಬಳ್ಳಿ ಮಾಮ್ ಅವರ ಅಂಗಡಿಯ ಪಕೋಡಾ ಕ್ಕೆ ಭಾರಿ ಬೇಡಿಕೆ ಇದೆ. ಸಂಜೆ ಯಾಗುತ್ತಿದ್ದಂತೆ ರಥ ಬೀದಿಯಲ್ಲಿ ಬಾಳಿಗ ಅವರ ಅಂಗಡಿಯ ಮುಂದೆ ಜನ ಮುಗಿಬಿದ್ದು ಪಕೋಡಾ ಖರೀದಿಸುತ್ತಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಪಕೋಡಾ ಹೇಳಿಕೆಯ ಬಳಿಕ ಪಕೋಡಾ ವ್ಯಾಪಾರಿಗಳಿಗೂ ಬೆಲೆ ಬಂದಿದೆ. ಒಂದೆಡೆ ಪಕೋಡಾ ಮಾರಾಟ ಮಾಡಿ ಜೀವನ ಸಾಗಿಸುವವರ ಗುಣಮಟ್ಟವನ್ನು ಕೆಲವರು ಬಡತನ , ಭಿಕ್ಷಾಟನೆಗೆ ಹೋಲಿಸಿದರೆ . ಇನ್ನೂಕೆಲವರು ಪಕೋಡಾ ಮಾರಾಟ ಕೂಡ ಸ್ವಾಭಿಮಾನಿ ಬದುಕಿನ ಮಾರ್ಗ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ವಿಶ್ಲೇಷಣೆಗೆ ಮಂಗಳೂರಿನ ಪಕೋಡಾ ವ್ಯಾಪಾರಿ ರಾಜೇಶ್ ಬಾಳಿಗ ಅವರ ಸ್ವಾಭಿಮಾನಿ ಬದುಕು ಉತ್ತಮ ಉದಾಹರಣೆಯಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *