LATEST NEWS
ಗಾಯಗೊಂಡು ಬಿದ್ದಿದ್ದ ಗರುಡವನ್ನು ರಕ್ಷಿಸಿದ ಪೇಜಾವರ ಕಿರಿಯ ಶ್ರೀಗಳು
ಗಾಯಗೊಂಡು ಬಿದ್ದಿದ್ದ ಗರುಡವನ್ನು ರಕ್ಷಿಸಿದ ಪೇಜಾವರ ಕಿರಿಯ ಶ್ರೀಗಳು
ಉಡುಪಿ ಫೆಬ್ರವರಿ 10: ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಕಿರಿಯ ಶ್ರೀ ವಿಶ್ವಪ್ರಸನ್ನರು ತಮ್ಮ ಮಠದ ಆವರಣದಲ್ಲಿ ಗಾಯಗೊಂಡು ಬಿದ್ದಿದ್ದ ಗರುಡವೊಂದನ್ನು ರಕ್ಷಿಸುವ ಮೂಲಕ ತಮ್ಮ ಪ್ರಾಣಿದೆಯಯನ್ನು ಮೆರೆದಿದ್ದಾರೆ.
ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನರು ಈಗಾಗಲೇ ನೀಲಾವರದಲ್ಲಿ ಗೋಶಾಲೆಯಲ್ಲಿ ಅನಾಥ ಗೋವುಗಳನ್ನು ಸಾಕುವುದರ ಮೂಲಕ ಹೆಸರುವಾಸಿಯಾಗಿದ್ದರು. ತಮ್ಮ ಮಠದ ಆವರಣದಲ್ಲಿ ಬಿದ್ದಿದ್ದ ಭಾರೀ ಗಾತ್ರದ ಗರುಡವೊಂದಕ್ಕೆ ವೈದ್ಯಕೀಯ ಉಪಚಾರ ಮಾಡಿದ್ದಾರೆ.
ತೆಂಗಿನ ಮರದಲ್ಲಿ ಕುಳಿತಿದ್ದ ಗರುಡ ಆಕಸ್ಮಿಕವಾಗಿ ಕೆಳಗೆ ಬಿದ್ದಿದೆ. ಬಿದ್ದ ರಭಸಕ್ಕೆ ಗಾಬರಿಗೊಂಡ ಗರುಡ ರೆಕ್ಕೆಗಳಿಗೆ ಪೆಟ್ಟು ಮಾಡಿಕೊಂಡು ಕಣ್ಣು ಸರಿಯಾಗಿ ಕಾಣದೆ ಒಂದೆಡೆ ಸುಮ್ಮನೆ ಕುಳಿತುಬಿಟ್ಟಿತ್ತು. ಸುದ್ದಿ ತಿಳಿದ ಕೊಡಲೇ ಸ್ಥಳಕ್ಕೆ ಆಗಮಿಸಿದ ಶ್ರೀಗಳು ಮೊದಲ ಹಂತದ ವೈದ್ಯಕೀಯ ಉಪಚಾರ ಮಾಡಿ ನಂತರ ಪ್ರಾಣಿವೈದ್ಯರ ಬಳಿ ಹೆಚ್ಚಿನ ಚಿಕಿತ್ಸೆಗಾಗಿ ಕಳಿಸಿಕೊಟ್ಟಿದ್ದಾರೆ.
You must be logged in to post a comment Login