Connect with us

KARNATAKA

ಬೆಂಗಳೂರಿನಲ್ಲಿ ಕಿಡ್ನ್ಯಾಪ್ ಆಗಿದ್ದ ವಿದ್ಯಾರ್ಥಿ ಹಾಸನದಲ್ಲಿ ಪತ್ತೆ..!

ಹಾಸನ : ಬೆಂಗಳೂರಿನಲ್ಲಿ ವಿದ್ಯಾರ್ಥಿಯೊಬ್ಬನನ್ನು ಅಪಹರಣ (Kidnap)  ಮಾಡಿದ್ದ ದುಷ್ಕರ್ಮಿಗಳು ಬಳಿಕ ಹಾಸನದಲ್ಲಿ ಬಿಟ್ಟು ಹೋಗಿರುವ ಘಟನೆ ನಡೆದಿದೆ.

ನಾಗಾರ್ಜುನ್ (17) ಅಪಹರಣ(Kidnap)ವಾದ ವಿದ್ಯಾರ್ಥಿಯಾಗಿದ್ದಾನೆ. ಬೆಂಗಳೂರಿನ ಅನಂತಪುರದ ಕೃಷ್ಣೇಗೌಡ ಎಂಬುವವರ ಮಗನಾಗಿದ್ದು ನಾಗಾರ್ಜುನ ಮಂಗಳವಾರ ಕಾಲೇಜಿಗೆ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ವಿಳಾಸ ಕೇಳುವ ನೆಪದಲ್ಲಿ ಆತನನ್ನು ಅಪಹರಿಸಿದ್ದರು. ಪ್ರಜ್ಞೆ ತಪ್ಪಿದ್ದ ವಿದ್ಯಾರ್ಥಿ ಎಚ್ಚರವಾದಾಗ ಹಾಸನ ಜಿಲ್ಲೆಯ ಅರಕಲಗೂಡು ಸಮೀಪವಿದ್ದ. ಅಲ್ಲಿಯೇ ಇದ್ದ ಮನೆಗೆ ತೆರಳಿ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದ. ಹಾಸನಕ್ಕೆ ಬಂದು ಮಗನನ್ನು ಕರೆದೊಯ್ದ ಪೋಷಕರು ಹಾಸನದ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.ತನಿಖೆ ಬಳಿಕ ವಿದ್ಯಾರ್ಥಿ ಅಪಹರಣಕ್ಕೆ ನಿಖರ ಕಾರಣ ತಿಳಿದುಬರಬೇಕಿದೆ.ಬೆಂಗಳೂರಿನ ಯಲಹಂಕ‌ ಪೊಲೀಸ್ ಠಾಣೆಗೆ ಕಿಡ್ನ್ಯಾಪ್‌ ಬಗ್ಗೆ ಪೋಷಕರು ದೂರು ನೀಡಿದ್ದು, ಯಾರು ಯಾವ ಕಾರಣಕ್ಕೆ ಕಿಡ್ನಾಪ್‌ ಮಾಡಿದ್ದಾರೆ ಎನ್ನೋ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ.

Share Information
Advertisement
Click to comment

You must be logged in to post a comment Login

Leave a Reply