BANTWAL
ಬಂಟ್ವಾಳ ಮೆಲ್ಕಾರ್‌ನಲ್ಲಿ ಪಾದಚಾರಿಗೆ ಸ್ಕೂಟರ್ ಡಿಕ್ಕಿ, ಗಂಭೀರ ಗಾಯ..!
ಬಂಟ್ವಾಳ: ಪಾದಚಾರಿಯೋರ್ವನಿಗೆ ಸ್ಕೂಟರ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆ ಎಂಬಲ್ಲಿ ನಡೆದಿದೆ.
ಕೊಡ್ಮಾನ್ ನಿವಾಸಿ ವಸಂತ ಕುಲಾಲ್ (53) ಗಾಯಗೊಂಡ ಪಾದಚಾರಿ ವ್ಯಕ್ತಿಯಾಗಿದ್ದಾರೆ.
ವಸಂತ ಕುಲಾಲ್ ಅವರು ಫರಂಗಿಪೇಟೆ ಬಸ್ ನಿಲ್ದಾಣದ ಕಡಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಅತೀ ವೇಗ ಮತ್ತು ನಿರ್ಲಕ್ಷ್ಯ ತನದಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದ ಸ್ಕೂಟರ್ ಸವಾರ ಸುನಿಲ್ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿಯ ರಭಸಕ್ಕೆ ವಸಂತ ಅವರು ರಸ್ತೆಯ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಇವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದುಡುಕುತನದ ಚಾಲನೆಯಿಂದ ಘಟನೆ ನಡೆದಿದೆ ಎಂದು ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
You must be logged in to post a comment Login