KARNATAKA
2024ರಲ್ಲಿ ಸೈಬರ್ ವಂಚಕರ ಪಾಲಾದ ಹಣ 1998 ಕೋಟಿ
ಬೆಂಗಳೂರು ಫೆಬ್ರವರಿ 04: ಸೈಬರ್ ಅಪರಾಧಿಗಳು ಬೆಂಗಳೂರಿನಲ್ಲಿ 2024ರಲ್ಲಿ ಬರೋಬ್ಬರಿ 1998.4 ಕೋಟಿ ರೂಪಾಯಿಗಳನ್ನು ಕೊಳ್ಳೆ ಹೊಡೆದಿದ್ದಾರೆ. ಈ ಸಂಖ್ಯೆ ಮಾತ್ರ ಸೈಬರ್ ಅಪರಾಧ ಭೀಕರತೆಯನ್ನು ಬಿಚ್ಚಿಡುವಂತಿದೆ.
ಇಂಡಿಯನ್ ಎಕ್ಸ್ ಪ್ರೇಸ್ ವರದಿ ಪ್ರಕಾರ ಬೆಂಗಳೂರಿನಲ್ಲೇ 2024ರಲ್ಲಿ ಇಷ್ಟು ಹಣ ಸೈಬರ್ ಅಪರಾಧಿಗಳ ಪಾಲಾಗಿದೆ. ಇದು ಹಿಂದಿನ ಎರಡು ವರ್ಷಗಳಿಂಗ ಹೆಚ್ಚು, ಆದರೆ 2023 ಕ್ಕೆ ಹೋಲಿಸಿದರೆ 2024 ರಲ್ಲಿ ಪ್ರಕರಣಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ. ಆದರೆ ಹಣ ಕಳೆದುಕೊಂಡಿದ್ದು ಮಾತ್ರ ಮೂರು ಪಟ್ಟು ಹೆಚ್ಚಾಗಿದೆ. ಪೊಲೀಸ್ ಮಾಹಿತಿಯ ಪ್ರಕಾರ, ನಗರದಲ್ಲಿ ಪ್ರತಿದಿನ ಸರಾಸರಿ 48 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗುತ್ತಿದ್ದು, ಒಟ್ಟು 17,560 ಪ್ರಕರಣಗಳನ್ನು 2024 ರಲ್ಲಿ ದಾಖಲಾಗಿದೆ. . ಈ ಪೈಕಿ 1,026 ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ವೈಟ್ ಫೀಲ್ಡ್ ವಿಭಾಗದ ಪೊಲೀಸರು ದಕ್ಷಿಣ ವಿಭಾಗದ ಪೊಲೀಸರು 3,680 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಒಂದು ವಿಪರ್ಯಾಸವೆಂದರೆ ಸೈಬರ್ ವಂಚನೆಯ ಬಲಿಪಶುವಾಗುವುದು ಹೆಚ್ಚು ಬುದ್ದಿವಂತರೆ ಅದರಲ್ಲೂ ಐಟಿ ಮತ್ತು ಬ್ಯಾಂಕ್ ವಲಯದ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇತ್ತೀಚೆಗೆ ಹೆಚ್ಚಿದ ಜಾಗೃತಿಯಿಂದಾಗಿ ಒಟಿಪಿ ಆಧಾರಿತ ವಂಚನೆಗಳು ಮತ್ತು ಇತರ ಹಗರಣಗಳು ಕಡಿಮೆಯಾಗಿದ್ದರೂ, ಹೂಡಿಕೆ ವಂಚನೆಗಳು ಮತ್ತು ಡಿಜಿಟಲ್ ಬಂಧನ ಹಗರಣಗಳು ಹೆಚ್ಚಾಗಿವೆ. ಪೊಲೀಸರು 652 ಕೋಟಿ ರೂಪಾಯಿಗಳನ್ನು ಸ್ಥಗಿತಗೊಳಿಸಿ 139 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ. ಅತೀ ಹೆಚ್ಚು ಓದಿದವರು ತಂತ್ರಜ್ಞಾನದ ಮಾಹಿತಿ ಇರುವವರೆ ಹಣದ ದುರಾಸೆಗೆ ಬಿದ್ದು, ಸೈಬರ್ ವಂಚಕರ ಜಾಲಕ್ಕೆ ಬೀಳುತ್ತಿದ್ದಾರೆ.