LATEST NEWS
ಸಿಎಂ ಸಿದ್ದರಾಮಯ್ಯರನ್ನು ಫೇಸ್ ಬುಕ್ ನಲ್ಲಿ ಅವಮಾನಿಸಿದ ಬೆಳ್ತಂಗಡಿ ಪೋಲಿಸ್ ಪೇದೆ
ಸಿಎಂ ಸಿದ್ದರಾಮಯ್ಯರನ್ನು ಫೇಸ್ ಬುಕ್ ನಲ್ಲಿ ಅವಮಾನಿಸಿದ ಬೆಳ್ತಂಗಡಿ ಪೋಲಿಸ್ ಪೇದೆ
ಮಂಗಳೂರು, ನವೆಂಬರ್ 01: ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಮಾಡಿ ಸಂದೇಶ ಪ್ರಕಟಿಸಿದ ಪೊಲೀಸ್ ಸಿಬ್ಬಂದಿ ಇದೀಗ ಸಂಕಷ್ಟಕ್ಕೆ ಸಿಲುಕಿದ ಪ್ರಸಂಗ ಬೆಳಕಿಗೆ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ರಾಜ ಶಿವಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಮಾನಿಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪ್ರಕಟಿಸಿದ್ದರು.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮೀನಿನ ಊಟದ ವಿವಾದ ಭುಗಿಲೆದ್ದಿತ್ತು.
ಅದನ್ನೇ ವ್ಯಂಗ್ಯ ವಾಗಿಸಿ ಮುಖ್ಯಮಂತ್ರಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಶ್ರೀ ಕ್ಷೇತ್ರ ಧರ್ಮಸ್ಥಳ ಭೇಟಿಯನ್ನು ತುಲನೆ ಮಾಡಿ ಪೋಲಿಸ್ ಪೇದೆ ಶಿವಪ್ಪ ಫೆಸ್ ಬುಕ್ ನಲ್ಲಿ ಪ್ರಕಟಿಸಿದ್ದರು.
“ಕೋಟ್ಯಂತರ ಹಿಂದೂ ಜನ ಆರಾಧಿಸುವ ನಾಡಿನ ಪ್ರಮುಖ ದೇವಸ್ಥಾನವನ್ನು ಮಾಂಸದ ಊಟ ಸೇವಿಸಿ ದೇವರ ದರ್ಶನ ಮಾಡಿದ ಮುಖ್ಯಮಂತ್ರಿ “ಎಂದು ಶೀರ್ಷಿಕೆ ಬರೆದು ಚಿತ್ರ ಪ್ರಕಟಿಸಿದ್ದರು.
ಅದಲ್ಲದೆ “ಮೈಲಾರಿ ಕಂಡಾಗ ಸಿಡುಕಿದ ಮುಖ ಮುಲ್ಲಾನನ್ನು ಕಂಡಾಗ ಅರಳಿದ ಮುಖ” ಎಂದು ಬರೆದು ಫೋಟೋ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದಲ್ಲದೇ ಮುಖ್ಯಮಂತ್ರಿಯವರನ್ನು “ಸಿದ್ದು ಖಾನ್ ” ಎಂದು ಸಂಬೋಧಿಸಿ ಬರಹ ಪ್ರಕಟಿಸಿದ್ದಾನೆ.
ಇದು ಇದೀಗ ಕಾಂಗ್ರೆಸ್ ಮುಖಂಡರ ಕೆಂಗಣ್ಣಿಗೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಪೊಲೀಸ್ ಕಾನ್ ಸ್ಟೆಬಲ್ ರಾಜ ಶಿವಪ್ಪ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ.
ಈ ಕುರಿತು ಇಂದು ಯುವ ಕಾಂಗ್ರೆಸ್ ಮುಖಂಡರು ಬೆಳ್ತಂಗಡಿ ಪೊಲೀಸ್ ಠಾಣೆಗೆ ತೆರಳಿ ಪೋಲಿಸ್ ಪೇದೆ ರಾಜ ಶಿವಪ್ಪ ಅವರ ವಿರುದ್ಧ ದೂರು ಸಲ್ಲಿಸಿದ್ದು ಈ ಕೂಡಲೇ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಯಾರು ಈ ರಾಜ ಶಿವಪ್ಪ ?
ರಾಜ ಶಿವಪ್ಪ ಮೂಲತಾ ಬಾಗಲಕೋಟೆಯ ಬೆಣೆಕಟ್ಟಿ ಗ್ರಾಮದವನು.
ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದ ಈತ ಪ್ರಸ್ತುತ ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ಪೋಲಿಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ.
ಬಲಪಂಥಿಯ ವಾದಗಳಲ್ಲಿ ಆತ ಹೆಚ್ಚು ಒಲವು ಹೊಂದಿರುವುದು ಆತನ ಸಾಮಾಜಿಕ ಜಾಲತಾಣಗಳಲ್ಲಿ ಆತನ ಬರಹಗಲಲ್ಲಿ ವ್ಯಕ್ತವಾಗುತ್ತದೆ.
Facebook Comments
You may like
ಕಂಠ ಪೂರ್ತಿ ಕುಡಿದು ಬಂದ ತಂದೆಯಿಂದ ನಶೆಯಲ್ಲಿ ಮಗಳ ಮೇಲೆ ಅತ್ಯಾಚಾರ
ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮೇಲೆ ತಲವಾರು ದಾಳಿ
ಅಪ್ರಾಪ್ತ ಬಾಲಕಿಯ ಅತ್ಯಾಚಾರ ಎಸಗಿ ಪೋಟೋ ಕ್ಲಿಕ್ಕಿಸಿ ಬ್ಲಾಕ್ ಮೇಲ್ .ಸಂತ್ರಸ್ತೆಯಿಂದ ಪೊಲೀಸರಿಗೆ ದೂರು
ನವದೆಹಲಿಯ ಮುಖ್ಯಮಂತ್ರಿ ಮಗಳಿಗೇ ಪಂಗನಾಮ!
ಪುತ್ತೂರು – ಪಾರ್ಟಿಗೆ ಬಂದ ಯುವತಿಯ ಮೇಲೆ ಅತ್ಯಾಚಾರ
ಶಿವಾಜಿ ಸ್ಟಿಕರ್ ಹಾಕಿದ್ದ ಬೈಕ್ ಸವಾರನಿಗೆ ಚೂರಿ ಇರಿತ..!
You must be logged in to post a comment Login