Connect with us

BELTHANGADI

ಬೆಳ್ತಂಗಡಿ: ಹೃದಯಾಘಾತದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಾವು

ಬೆಳ್ತಂಗಡಿ, ಆಗಸ್ಟ್ 10: ತಾಲ್ಲೂಕಿನ ನೆರಿಯಾ ಗ್ರಾಮದ ಪಿಲಿಕಳ ಪಂಪ್ ಹೌಸ್ ಬಳಿಯ ನಿವಾಸಿ ಸಚಿನ್ (17) ಮಂಗಳವಾರ ಹೃದಯಘಾತದಿಂದ ಮನೆಯಲ್ಲಿ ಮೃತಪಟ್ಟಿದ್ದಾನೆ.

ಮುಂಡಾಜೆ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಈತ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ.

ಮಂಗಳವಾರ ಕಾಲೇಜಿಗೆ ರಜೆ ಇದ್ದು, ಮನೆಯಲ್ಲಿದ್ದ ಸಂದರ್ಭ ಏಕಾಏಕಿ ಎದೆನೋವು ಕಾಣಿಸಿಕೊಂಡಿತ್ತು. ಅವಳಿ ಮಕ್ಕಳ ಪೈಕಿ ಒಬ್ಬನಾಗಿದ್ದ ಈತನಿಗೆ ತಂದೆ, ತಾಯಿ, ಹಾಗೂ ಇಬ್ಬರು ಸಹೋದರರು ಇದ್ದಾರೆ.

Advertisement
Click to comment

You must be logged in to post a comment Login

Leave a Reply