BELTHANGADI
ದೇಶದ ಪ್ರಧಾನಿಗೆ ಬಾಂಗ್ಲಾ ಹಿಂಸಾಚಾರದ ಎಚ್ಚರಿಕೆ ನೀಡಿದ ಕಾಂಗ್ರೇಸ್ ಮುಖಂಡ ರಕ್ಷಿತ್ ಶಿವರಾಂ
ಬೆಳ್ತಂಗಡಿ ಅಗಸ್ಟ್ 19: ಬಾಂಗ್ಲಾದೇಶದ ಪ್ರಧಾನಿ ಹೇಗೆ ಹಾಸಿಗೆ,ದಿಂಬು ಹಿಡಿದುಕೊಂಡು ದೇಶ ಬಿಟ್ಟು ಹೋಗಿರುವ ರೀತಿ ನಿಮಗೂ ಅತೀ ಶೀಘ್ರದಲ್ಲೇ ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾಂಗ್ರೇಸ್ ಮುಖಂಡ ರಕ್ಷಿತ್ ಶಿವರಾಂ ಎಚ್ಚರಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ರಕ್ಷಿತ್ ಶಿವರಾಂ ಬಾಂಗ್ಲಾ ದೇಶದಲ್ಲಿ ಅಲ್ಲಿನ ಪ್ರಧಾನಿ ಮನೆಯನ್ನು ಯಾವ ರೀತಿ ಮಾಡಲಾಯಿತೋ ಅದೇ ಪರಿಸ್ಥಿತಿ ನರೇಂದ್ರ ಮೋದಿಗೆ ಬರಲಿದೆ, ಹಾಸಿಗೆ,ದಿಂಬು ಹಿಡಿದುಕೊಂಡು ಓಡಬೇಕಾದ ಸ್ಥಿತಿ ಅತೀ ಶೀಘ್ರದಲ್ಲಿ ಬರಲಿದೆ ಎಂದು ಹೇಳಿದ್ದಾರೆ. ಈ ಮೂಲಕ ದೇಶದ ಪ್ರಧಾನಿಗೆ ಬಾಂಗ್ಲಾದೇಶದ ಮಾದರಿ ಹಿಂಸಾಚಾರದ ಎಚ್ಚರಿಕೆ ನೀಡಿದ್ದಾರೆ. ಸದ್ಯ ರಕ್ಷಿತ್ ಶಿವರಾಂ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
You must be logged in to post a comment Login