Connect with us

    LATEST NEWS

    ಬೀಜಾಡಿ ಸಮುದ್ರ ತೀರದಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಕಾರವಾರ ಸಮುದ್ರ ತೀರದಲ್ಲಿ ಪತ್ತೆ

    ಕುಂದಾಪುರ ಜೂನ್ 25 : ಕುಂದಾಪುರದ ಬೀಜಾಡಿ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಏಳು ದಿನಗಳ ಬಳಿಕ ಕಾರವಾರ ಸಮುದ್ರ ತೀರದಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ಮೃತ ಯುವಕನನ್ನು ತುಮಕೂರು ಜಿಲ್ಲೆಯ ತಿಪಟೂರಿನ ಟಿ.ಆರ್‌. ಯೋಗೀಶ್‌ (23) ಎಂದು ಗುರುತಿಸಲಾಗಿದೆ.


    ಕಳೆದ ಬುಧವಾರ( ಜೂನ್ 19) ರಂದು ಸಂಜೆ 6.45ರ ಸುಮಾರಿಗೆ ಕೋಟೇಶ್ವರ ಸಮೀಪದ ದಾರಸ್‌ ಮನೆ ಸಮೀಪದ ಬೀಚ್‌ಗೆ ಯೋಗೀಶ್‌ ಹಾಗೂ ಸಂದೀಪ್‌ ವಿಹಾರಕ್ಕೆಂದು ಬಂದಿದ್ದರು. ಈ ವೇಳೆ ಯೋಗೀಶ್‌ ನೀರಿಗಿಳಿದಿದ್ದಾರೆ. ಅಲೆಯಬ್ಬರಕ್ಕೆ ಯೋಗೀಶ್‌ ಕೊಚ್ಚಿಕೊಂಡು ಹೋಗುತ್ತಿದ್ದುದನ್ನು ಕಂಡ ಜತೆಗಿದ್ದ ಸಂದೀಪ್‌ ಅವರು ಯೋಗೀಶ್‌ ನನ್ನು ರಕ್ಷಿಸಲು ಪ್ರಯತ್ನಿಸಿದ್ದು, ಈ ವೇಳೆ ಆತ ಸಹ ಅಲೆಗಳ ಸೆಳೆತಕ್ಕೆ ಕೊಚ್ಚಿ ಹೋಗುವ ಅಪಾಯವನ್ನು ಅರಿತ ಅಲ್ಲಿದ್ದ ಸ್ಥಳೀಯರು ಸಂದೀಪ್‌ನನ್ನು ರಕ್ಷಿಸಿದ್ದಾರೆ. ಆದರೆ ಯೋಗೀಶ್‌ ಮಾತ್ರ ಸಮುದ್ರದ ನೀರಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದ. ಇದಾದ ಬಳಿಕ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಯೋಗೀಶ್ ಮೃತದೇಹ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಘಟನೆ ನಡೆದು ಏಳನೇ ದಿನಕ್ಕೆ ಯೋಗೀಶ್ ಮೃತ ದೇಹ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply