DAKSHINA KANNADA
ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ ಜಯ್ ಷಾ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ…!!
ಪುತ್ತೂರು ಜುಲೈ 30: ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ ಬಿಸಿಸಿಐ ಕಾರ್ಯದರ್ಶಿಯಾಗಿರುವ ಜಯ್ ಷಾ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪತ್ನಿ ರಿಷಿತಾ ಷಾ ಮತ್ತು ಕುಟುಂಬಸ್ಥರೊಂದಿಗೆ ಆಗಮಿಸಿದ ಜಯ್ ಶಾ ದೇವರ ದರ್ಶನ ಪಡೆದು ಆಶ್ಲೇಷ ಬಲಿ ಪೂಡೆ ನೆರವೇರಿಸಿದರು.
ಬಳಿಕ ದೇವಸ್ಥಾನದಲ್ಲೇ ಬೋಜನ ಸ್ವೀಕರಿಸಿದರು, ಅಮಿತ್ ಷಾ ಹೆಸರಿನಲ್ಲಿ ನಡೆಯುವ ನಿತ್ಯ ಅನ್ನ ದಾಸೋಹ ಕ್ಕೆ ದೇಣಿಗೆ ನೀಡಿದ ಜಯ್ ಷಾ ಗೆ ಕ್ಷೇತ್ರದ ವ್ಯವಸ್ಥಾಪನ ಸಮಿತಿಯಿಂದ ಗೌರವ ಸಲ್ಲಿಸಲಾಯಿತು. ಈ ವೇಳೆ ದೇಶ-ವಿದೇಶದಲ್ಲಿ ನಾಗಾರಾಧನೆಗೆ ಹೆಸರಾದ ಕುಕ್ಕೆಗೆ ಭೇಟಿ ನೀಡಬೇಕೆಂದ ಇಚ್ಛೆ ಇತ್ತು, ಇಂದು ದೇವರು ಆ ಇಚ್ಛೆಯನ್ನು ನೆರವೇರಿಸಿದರು ಎಂದು ವ್ಯವಸ್ಥಾಪನ ಸಮತಿಯೊಂದಿಗೆ ಮಾತನಾಡಿದ ಜಯ್ ಷಾ ತಿಳಿಸಿದ್ದಾರೆ.
You must be logged in to post a comment Login