LATEST NEWS
ಬಪ್ಪನಾಡು ದುರ್ಗಾಪರಮೇಶ್ವರಿಗೆ ಜಲದಿಗ್ಬಂದನ….!!

ಮೂಲ್ಕಿ ಜುಲೈ 06: ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆ ಇದೀಗ ಪ್ರವಾಹ ಪರಿಸ್ಥಿತಿಯನ್ನು ತಂದಿದ್ದು, ಜಿಲ್ಲೆಯ ಹಲವು ಪ್ರದೇಶಗಳು ಇದೀಗ ನೆರೆಪೀಡಿತವಾಗಿದೆ. ಈ ನಡವೆ ಇಲ್ಲಿನ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನವು ಗುರುವಾರ ಜಲಾವೃತಗೊಂಡಿದೆ.
ಕೊಡಿ ಮರ ಇರುವ ದೇವಸ್ಥಾನದ ಹೊರಗಿನ ಸುತ್ತನ್ನು ದಾಟಿ ಬಂದಿರುವ ಮಳೆ ನೀರು ಗರ್ಭಗುಡಿ ಇರುವ ಸುತ್ತನ್ನೂ ಆವರಿಸಿದೆ. ಗರ್ಭಗುಡಿಯ ಮೆಟ್ಟಿಲುಗಳು ಮುಳುಗಿವೆ. ತೀರ್ಥ ಮಂಟಪವಿರುವ ಪ್ರದೇಶದಲ್ಲಿ ಎರಡು ಅಡಿಗಳಿಗೂ ಹೆಚ್ಚು ನೀರು ನಿಂತಿದೆ.

Continue Reading