LATEST NEWS
ಶಬರಿಮಲೆಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿ ಅಗ್ನಿ ಕುಂಡ ಸಮೀಪದ ಮರಕ್ಕೆ ಬೆಂಕಿ
ಶಬರಿಮಲೆಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿ ಅಗ್ನಿ ಕುಂಡ ಸಮೀಪದ ಮರಕ್ಕೆ ಬೆಂಕಿ
ಕೇರಳ ಜನವರಿ 5: ಶಬರಿಮಲೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅಗ್ನಿ ಕುಂಡದ ಸಮೀಪದಲ್ಲಿರುವ ಅಶ್ವತ್ಥ ಮರಕ್ಕೆ ಬೆಂಕಿ ತಾಗಿದ ಘಟನೆ ನಡೆದಿದೆ.
ಶಬರಿಮಲೆ ಸನ್ನಿಧಾನದ 18 ಮೆಟ್ಟಿಲು ಸಮೀಪ ಇರುವ ಮರ ಇದಾಗಿದ್ದು, ಇದರ ಸಮೀಪದಲ್ಲೇ ಅಗ್ನಿ ಕುಂಡ ಇದ್ದು, ಭಕ್ತರ ತುಪ್ಪದ ಕಾಯಿಯನ್ನು ತಂದು ಈ ಅಗ್ನಿ ಕುಂಡಕ್ಕೆ ಹಾಕುವುದು ಪದ್ದತಿ. ಶತಮಾನಗಳಿಂದಲೂ ಈ ಕಾರ್ಯ ನಡೆಯುತ್ತಾ ಬಂದಿದ್ದರೂ ಇಲ್ಲಿಯವರೆಗೆ ಸಮೀಪದಲ್ಲೇ ಇರುವ ಮರಕ್ಕೆ ಬೆಂಕಿ ತಗುಲಿದ ವಿಧ್ಯಮಾನ ನಡೆದಿಲ್ಲ.
ಆದರೆ 40ರ ವಯಸ್ಸಿನ ಒಳಗಿನ ಮಹಿಳೆಯರ ಶಬರಿಮಲೆ ಪ್ರವೇಶಿ ದೇವರ ದರ್ಶನ ಪಡೆದ ನಂತರ ಈ ರೀತಿ ಮರಕ್ಕೆ ಬೆಂಕಿ ತಗುಲಿದ್ದು, ಇದು ಅಯ್ಯಪ್ಪ ಸ್ವಾಮಿ ಕೋಪಗೊಂಡಿದ್ದಾನೆ ಎನ್ನುವುದಕ್ಕೆ ಸಾಕ್ಷಿ ಎಂದು ಅಯ್ಯಪ್ಪ ಭಕ್ತರ ಅನಿಸಿಕೆ.
ಇಂದು ಬೆಳಿಗ್ಗೆ 11.30 ಸುಮಾರಿಗೆ ಈ ಮರಕ್ಕೆ ಬೆಂಕಿ ತಗುಲಿದ್ದು, ದೇವಸ್ಥಾನದ ಸಿಬ್ಬಂದಿಗಳು ಬೆಂಕಿಯನ್ನು ಆರಿಸಿದ್ದಾರೆ. ಬೆಂಕಿ ಬಿದ್ದ ತಕ್ಷಣ ದೇವರ ದರ್ಶನಕ್ಕೆ ಭಕ್ತರನ್ನು ತಡೆಹಿಡಿಲಾಗಿತ್ತು. ಬೆಂಕಿ ನಂದಿಸಿದ ನಂತರ ಮತ್ತೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಕೇರಳ ಸರಕಾರ ಹಠಕ್ಕೆ ಬಿದ್ದು ಮಹಿಳೆಯರು ಶಬರಿಮಲೆ ದರ್ಶನಕ್ಕೆ ಅನುವು ಮಾಡಿಕೊಡುತ್ತಿದ್ದು, ದೇವಾಲಯದ ಆಚಾರ ವಿಚಾರವನ್ನು ಪಾಲಿಸದೇ ಮಾಡಿದ್ದರಿಂದ ಈ ರೀತಿಯ ಅವಘಡಗಳು ನಡೆಯುತ್ತಿದೆ ಎಂದು ಹೇಳಲಾಗಿದೆ.