Connect with us

UDUPI

ಅಯ್ಯಪ್ಪ ದೇವರ ದರ್ಶನ ಖುಷಿಯಾಗಿದೆಯಾ ಅಂತ ಹೋದವರನ್ನು ಕೇಳಿ – ಸಚಿವೆ ಜಯಮಾಲಾ

ಅಯ್ಯಪ್ಪ ದೇವರ ದರ್ಶನ ಖುಷಿಯಾಗಿದೆಯಾ ಅಂತ ಹೋದವರನ್ನು ಕೇಳಿ – ಸಚಿವೆ ಜಯಮಾಲಾ

ಉಡುಪಿ ಜನವರಿ 5: ಕೇರಳ ಶಬರಿಮಲೆಗೆ ಇಬ್ಬರು ಮಹಿಳೆಯರ ಪ್ರವೇಶ ವಿಚಾರಕ್ಕೆ ಪ್ರತಿಕ್ರಿಯೆ ಕೇಳಲು ಬಂದ ಪತ್ರಕರ್ತರ ಮೇಲೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಗರಂ ಆದರು.

ಶಬರಿಮಲೆ ಬಗ್ಗೆ ಮಾತಾಡಿ ಮಾತಾಡಿ ನಾನು ಸುಸ್ತಾಗಿ ಬಿಟ್ಟೆ. ನಾನು ಈ ಬಗ್ಗೆ ಏನೂ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ದೇವರನ್ನು ಯಾರೂ ವ್ಯಾಪಾರಕ್ಕೆ ಇಡಬಾರದು. ನಾನು ದೇವರನ್ನು ನಂಬಿಕೆಯ ತಳಹದಿಯಲ್ಲಿ ನೋಡುವವಳು. ಶಬರಿಮಲೆಗೆ ಭಕ್ತಿಯಿಂದ ಹೋಗಬೇಕು ಎಂಬುದು ನನ್ನ ಭಾವನೆ. ದೇವರ ದರ್ಶನ ಖುಷಿಯಾಗಿದ್ಯಾ ಅಂತ ಹೋದವರನ್ನು ಕೇಳಿ ಎಂದು ಅವರು ಕೋಪಗೊಂಡರು.

ಕನ್ನಡ ಚಿತ್ರರಂಗದ ಖ್ಯಾತ ನಟರ ಮನೆ ಮೇಲೆ ಐಟಿ ರೈಡ್ ಬಗ್ಗೆ ಮಾತನಾಡಿದ ಅವರು ಕನ್ನಡ ಚಿತ್ರರಂಗದ ಕಲಾವಿದರು ನಿಯಮ ಪ್ರಕಾರ ತೆರಿಗೆಯನ್ನು ಕಟ್ಟಿರುತ್ತಾರೆ. ಐಟಿ ದಾಳಿ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದರು. ಐಟಿ ಅಧಿಕಾರಿಗಳು ಅವರ ಕೆಲಸ ಮಾಡುತ್ತಾರೆ. ಐಟಿ ದಾಳಿಯಿಂದಾಗಿ ಕನ್ನಡ ಚಿತ್ರರಂಗ ಯಾವ ಎತ್ತರಕ್ಕೆ ಬೆಳೆದಿದೆ ಎಂದು ಗೊತ್ತಾಗುತ್ತದೆ. ಇದರಿಂದ ಕಲಾವಿದರಿಗೆ ಯಾವುದೇ ರೀತಿಯ ಹಿನ್ನಡೆ ಇಲ್ಲ ಎಂದು ಹೇಳಿದರು.

Facebook Comments

comments