ಅಖಿಲ ಭಾರತ ಕಾರ್ಮಿಕರ ಮುಷ್ಕರ ಬೆಂಬಲಿಸಿ ಹಮಾಲಿ ಕಾರ್ಮಿಕರಿಂದ ಮೆರವಣಿಗೆ

ಮಂಗಳೂರು ಜನವರಿ 5: ಜನವರಿ 8 ಹಾಗೂ 9ರಂದು ನಡೆಯಲಿರುವ ಕಾರ್ಮಿಕರ ರಾಷ್ಟ್ರವ್ಯಾಪಿ ಮುಷ್ಕರದ ಹಿನ್ನಲೆಯಲ್ಲಿ ಮಂಗಳೂರಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಹಳೆ ಬಂದರು ಸಗಟು ಮಾರುಕಟ್ಟೆಯ ಹಮಾಲಿ ಕಾರ್ಮಿಕರು ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಮೆರವಣಿಗೆ ಮತ್ತು ಪ್ರಚಾರ ಸಭೆ ನಡೆಸಿದರು.

ಇಂದು ಮಾರುಕಟ್ಟೆಯಲ್ಲಿ ವ್ಯಾಪಾರ ಚಟುವಟಿಕೆ ಆರಂಭಗೊಳ್ಳುತ್ತಿದ್ದಂತೆ ಕಾರ್ಮಿಕರ ಕಟ್ಟೆ ಬಳಿ ಜಮಾಯಿಸಿದ ಕಾರ್ಮಿಕರು ಪೋರ್ಟ್ ರಸ್ತೆ, ಕೃಷ್ಣಮಿಲ್ ರಸ್ತೆ, ಜೆ.ಎಂ ರಸ್ತೆ, ಚೇಂಬರ್ ರಸ್ತೆ ಗಳಲ್ಲಿ ಮೆರವಣಿಗೆ ನಡೆಸಿ ಬಳಿಕ ಕಾರ್ಮಿಕರ ಕಟ್ಟೆ ಬಳಿ ಸಭೆ ನಡೆಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಅವರು ನರೇಂದ್ರ ಮೋದಿ ಸರಕಾರ ಕಾರ್ಪೊರೇಟ್ ಕಂಪೆನಿಗಳ ಹಿತಕಾಯುವ ಸಲುವಾಗಿ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಂಡಿದೆ.

ಸ್ವಿಸ್ ಬ್ಯಾಂಕಲ್ಲಿರುವ ಕಪ್ಪು ಹಣವನ್ನು ಎಲ್ಲಾ ಬಡವರ ಖಾತೆಗೆ 15 ಲಕ್ಷ ಹಾಕುತ್ತೇನೆ ಮುಗ್ದ ಜನರನ್ನು ನಂಬಿಸಿ ಅಧಿಕಾರಕ್ಕೇರಿದ ನಂತರ ದೇಶದ ರೈತರು,ಕಾರ್ಮಿಕರಿಗೆ ಸಾಲುಸಾಲು ಸಂಕಷ್ಟಗಳ ಕೊಡುಗೆಗಳನ್ನು ಕೊಟ್ಟರೇ ವಿನಹ ಅಚ್ಚೇದಿನ್ ಕೊಡಲಿಲ್ಲ ಎಂದು ಇಮ್ತಿಯಾಝ್ ಆಪಾದಿಸಿದರು.

Facebook Comments

comments