BANTWAL
ಬಂಟ್ವಾಳ -ಕ್ರೇನ್ ನ ಕೊಕ್ಕೆ ತಾಗಿ ಲಾರಿ ಮುಂಭಾಗಕ್ಕೆ ಹಾನಿ..ಬಚಾವ್ ಆದ ಡ್ರೈವರ್

ಬಂಟ್ವಾಳ ಅಕ್ಟೋಬರ್ 31: ಲಾರಿಯೊಂದಕ್ಕೆ ಕ್ರೇನ್ ನ ಎದುರು ಭಾಗ ತಾಗಿದ ಪರಿಣಾಮ ಲಾರಿ ಮುಂಭಾಗಕ್ಕೆ ಹಾನಿಯಾದ ಘಟನೆ ಅಜ್ಜಿಬೆಟ್ಟು ಕ್ರಾಸ್ ಬಳಿ ನಡೆದಿದ್ದು, ಅಪಘಾತದ ಪರಿಣಾಮ ಈ ಭಾಗದಲ್ಲಿ ಕೆಲ ಹೊತ್ತು ಸಂಚಾರಕ್ಕೆ ಅಡಚಣೆ ಉಂಟಾಯಿತು.
ಬಿಸಿರೋಡಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಅಜ್ಜಿ ಬೆಟ್ಟು ಕ್ರಾಸ್ ನಲ್ಲಿ ಅಪಘಾತ ಸಂಭಿಸಿದ್ದು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಕ್ರೇನ್ ಚಾಲಕ ಬಸ್ ನಿಲ್ದಾಣದ ಕಡೆಯಿಂದ ಮತ್ತೆ ಬಿಸಿರೋಡು ಪೇಟೆಗೆ ಹೋಗುವ ಉದ್ದೇಶದಿಂದ ಅಜ್ಜಿಬೆಟ್ಟು ಕ್ರಾಸ್ ನಲ್ಲಿ ತಿರುಗಿಸಿದಾಗ ಕೈಕಂಬ ಕಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ. ಕ್ರೇನ್ ನ ಎದುರು ಭಾಗ ಲಾರಿಯ ಮೇಲ್ಬಾಗಕ್ಕೆ ತಾಗಿದ್ದು ಸ್ವಲ್ಪ ಡ್ಯಾಮೇಜ್ ಉಂಟಾಗಿದೆ.

ಲಾರಿ ಚಾಲಕನ ತಲೆ ಮೇಲೆಯೇ ಡ್ಯಾಮೇಜ್ ಆಗಿದ್ದು, ಲಾರಿ ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಗಾಯವಾಗದೆ ಪಾರಾಗಿದ್ದಾನೆ. ಕ್ರೇನ್ ನ ಕೊಕ್ಕು ತಾಗಿದ ಕೂಡಲೇ ಎಚ್ಚೆತ್ತುಕೊಂಡ ಚಾಲಕ ತಲೆಯನ್ನು ಕಳೆಗೆ ಮಾಡಿದ ಪರಿಣಾಮವಾಗಿ ಬಚಾವ್ ಆಗಿದ್ದಾನೆ.