Connect with us

  DAKSHINA KANNADA

  ಪುತ್ತೂರು – 4 ಮಂದಿ ಅಡಿಕೆ ಕಳ್ಳರು ಅರೆಸ್ಟ್

  ಪುತ್ತೂರು ಅಕ್ಟೋಬರ್ 31: ಬಡಗನ್ನೂರು ಗ್ರಾಮದ ಕೊಯಿಲಾ ಎಂಬಲ್ಲಿರುವ ನವೀನ ಕುಮಾರ್ ರೈ ರವರ ಹಳೆಯ ಮನೆಯಿಂದ ಅಡಿಕೆ ಕಳ್ಳತನ ಮಾಡಿದ 4 ಮಂದಿ ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ.


  ಬಂಧಿತ ಆರೋಪಿಗಳನ್ನು ಪುತ್ತೂರಿನ ನಿವಾಸಿಗಳಾದ ಶ್ರವಣ್ ಕೆ, ಪ್ರಾಯ(20) , ಜಯಚಂದ್ರ(21), ಅಶೋಕ (24), ಪುನೀತ್ (20) ಬಂಧಿತರಿಂದ 4,15,925/- ಮೌಲ್ಯದ ಸೊತ್ತನ್ನು ವಶಕ್ಕೆ ಪಡೆದಿದ್ದಾರೆ.


  ಬಡಗನ್ನೂರು ಗ್ರಾಮದ ಕೊಯಿಲಾ ಎಂಬಲ್ಲಿರುವ ನವೀನ ಕುಮಾರ ರೈ ರವರ ಹಳೆಯ ಮನೆಯ ಕೊಟ್ಟಿಗೆಯ ಅಟ್ಟದಲ್ಲಿದ್ದ ಎನ್ ಕೆ ಆರ್ ಎಂದು ಮಾರ್ಕ್ ಮಾಡಿರುವ ಸುಮಾರು 23 ಗೋಣಿ ಸುಲಿಯದ ಅಡಿಕೆಯನ್ನು ದಿನಾಂಕ 12-10-2023 ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಅ ಕ್ರ 105/2023 ಕಲಂ:454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. ಸುಮಾರು ರೂ 1,55,925/- ಮೌಲ್ಯದ ಅಡಿಕೆ ಹಾಗೂ ಕಳವು ಮಾಡಲು ಉಪಯೋಗಿಸಿದ ಸ್ವಿಪ್ಟ್ ಕಾರು ಮತ್ತು ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿರುತ್ತಾರೆ. ವಶಪಡಿಸಿಕೊಂಡಿರುವ ಸೊತ್ತುಗಳ ಒಟ್ಟು ಮೌಲ್ಯ ಸುಮಾರು ರೂ 4,15,925/- ಆಗಿರುತ್ತದೆ.

  Share Information
  Advertisement
  Click to comment

  You must be logged in to post a comment Login

  Leave a Reply