Connect with us

FILM

ಬಾಂಗ್ಲಾದೇಶದ ನಟಿ ಶವ ಗೋಣಿಚೀಲದಲ್ಲಿ ಪತ್ತೆ….!!

ನವದೆಹಲಿ : ಬಾಂಗ್ಲಾದೇಶದ ನಟಿಯೊಬ್ಬಳ ಮೃತದೇಹ ಗೋಣಿಚೀಲದಲ್ಲಿ ಪತ್ತೆಯಾದ ಘಟನೆ ನಡೆದಿದೆ. ಬಾಂಗ್ಲಾದೇಶದ ಹಜಾರತ್‌ಪುರ ಸಮೀಪದಲ್ಲಿರುವ ಸೇತುವೆ ಬಳಿ ರೈಮಾ ಅವರ ಮೃತದೇಹ ಪತ್ತೆಯಾಗಿದೆ. ಅವರು ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದರು.


ಈ ಸಂಬಂಧ ರೈಮಾ ಪತಿ ಹಾಗೂ ಕುಟುಂಬದವರು ದೂರ ದಾಖಲಿಸಿದ್ದರು. ಮೃತದೇಹವನ್ನು ವಶಕ್ಕೆ ಪಡೆದಿರುವ ಪೊಲೀಸರು ಶವ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರಗೆ ಕಳುಹಿಸಿದ್ದಾರೆ.


ಈ ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರು ರೈಮಾ ಪತಿ ಹಾಗೂ ಕಾರು ಚಾಲಕನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Advertisement
Click to comment

You must be logged in to post a comment Login

Leave a Reply