Connect with us

National

ಚೀನೀಯರ ಟಿಕ್ ಟಾಕ್, ಝೂಮ್ ಸೇರಿ 52 ಆ್ಯಪ್ ನಿಷೇಧಿಸಲು ಶಿಫಾರಸು

ನವದೆಹಲಿ, ಜೂನ್ 18 : ಸದ್ಯ ಭಾರತೀಯರು ಹೆಚ್ಚು ಬಳಸುತ್ತಿರುವ ಟಿಕ್ ಟಾಕ್, ಝೂಮ್ ಆ್ಯಪ್ ಸೇರಿದಂತೆ 52 ಚೀನಾ ಮೂಲದ ಮೊಬೈಲ್ ಆ್ಯಪ್ ಗಳನ್ನು ನಿಷೇಧಿಸುವಂತೆ ಭಾರತ ಸರಕಾರಕ್ಕೆ ಗುಪ್ತಚರ ಸಂಸ್ಥೆ ವರದಿ ಮಾಡಿದೆ.

ಝೂಮ್ ಆ್ಯಪ್ ಮೂಲಕ ಭಾರತದಲ್ಲಿ ಅತಿ ಹೆಚ್ವು ಸಮೂಹ ಸಂವಹನ ನಡೆಯುತ್ತಿದೆ. ಅಧಿಕಾರಿಗಳು, ಶಿಕ್ಷಣ ಸಂಸ್ಥೆಗಳಲ್ಲಿ ಆನ್ ಲೈನ್ ಕಲಿಕೆ ಸೇರಿದಂತೆ ಕೊರೊನಾ ಸಂದರ್ಭದಲ್ಲಿ ಮನೆಯಲ್ಲಿದ್ದು ಉದ್ಯೋಗ ನಿರತರಾಗಿರುವ ಮಂದಿ ಝೂಮ್ ಆ್ಯಪನ್ನು ಬಳಸುತ್ತಿದ್ದಾರೆ. ಆದರೆ, ಜೂಮ್ ಆ್ಯಪ್ ಭದ್ರತಾ ದೃಷ್ಟಿಯಿಂದ ಸೂಕ್ತವಾಗಿಲ್ಲ. ಚೀನೀಯರು ಭಾರತೀಯರ ವೈಯಕ್ತಿಕ ದಾಖಲೆಗಳನ್ನು ಮತ್ತು ರಕ್ಷಣೆ ಕುರಿತ ವಿಚಾರಗಳನ್ನು ನಕಲು ಮಾಡುವ ಸಾಧ್ಯತೆಯಿದೆ ಎಂದು ಗುಪ್ತಚರ ಏಜೆನ್ಸಿ ಎಚ್ಚರಿಕೆ ನೀಡಿದೆ. ಜೂಮ್ ಸೇರಿದಂತೆ ಶೇರ್ ಇಟ್, ಯುಸಿ ಬ್ರೌಸರ್, ಟಿಕ್ ಟಾಕ್, ಕ್ಲೀನ್ ಮಾಸ್ಟರ್ ಹೀಗೆ 52 ಚೀನೀ ಮೂಲದ ಆ್ಯಪ್ ಗಳನ್ನು ಬಳಸದಂತೆ ಗುಪ್ತಚರ ಸಂಸ್ಥೆ ಪಟ್ಟಿ ಮಾಡಿದೆ.

ಇತ್ತೀಚೆಗೆ ಝೂಮ್ ಆ್ಯಪ್ ಬಳಸದಂತೆ ಕೇಂದ್ರ ಗೃಹ ಸಚಿವಾಲಯ ಜನರಿಗೆ ಸಲಹೆ ಮಾಡಿತ್ತು. ಆದರೆ, ಈ ಸಲಹೆಯನ್ನು ಜನರು ಮಾನ್ಯ ಮಾಡಿಲ್ಲ. ಈಗ ಚೀನಾ ಗಡಿಯಲ್ಲಿ ಉದ್ಧಟತನ ಮೆರೆದಿರುವ ಸಂದರ್ಭದಲ್ಲಿ ಚೀನಾದ ಮುಖಕ್ಕೆ ಹೊಡೆಯಲು ಇಂಥ ಕ್ರಮ ತೆಗೆದುಕೊಳ್ಳಲು ಸಕಾಲ ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ.

ಈಗಾಗ್ಲೇ ತೈವಾನ್, ಜರ್ಮನಿ ಮತ್ತು ಅಮೆರಿಕದಲ್ಲಿ ಝೂಮ್ ಆ್ಯಪ್ ಬಳಕೆ ನಿಲ್ಲಿಸಲಾಗಿದೆ. ಅಮೆರಿಕದ ಸಂಸದರು ಝೂಮ್ ಬದಲು ಪರ್ಯಾಯವಾಗಿ ಆಭಿವೃದ್ಧಿಪಡಿಸಿದ ಆ್ಯಪನ್ನು ಬಳಸುತ್ತಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *