Connect with us

    National

    ಇನ್ನು ಕೇರಳಕ್ಕೆ ಬರಬೇಕಿದ್ದರೆ ಕೋವಿಡ್ ಫ್ರೀ ಪ್ರಮಾಣ ಪತ್ರ ಕಡ್ಡಾಯ !

    ಮಂಗಳೂರು, ಜೂನ್ 18 : ಇನ್ನು ಕೇರಳಕ್ಕೆ ವಿದೇಶಗಳಿಂದ ಬರುವವರು ಕಡ್ಡಾಯವಾಗಿ ತಮಗೆ ಕೊರೊನಾ ಇಲ್ಲವೆಂದು ದೃಢೀಕೃತ ಪತ್ರ ತರಬೇಕು. ಇಲ್ಲದೇ ಇದ್ದರೆ ಪ್ರವೇಶ ನೀಡಬಾರದು ಎಂದು ಕೇರಳ ಸರಕಾರ ನಿರ್ಣಯ ತೆಗೆದುಕೊಂಡಿದೆ.

    ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಿಣರಾಯಿ ವಿಜಯನ್ ಸರಕಾರ ಸಂಪುಟದಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡಿದೆ. ಜೂನ್ 20ರ ನಂತರ ಹೊರದೇಶಗಳಿಂದ ರಾಜ್ಯಕ್ಕೆ ಆಗಮಿಸುವ ಮಂದಿ ಅಧಿಕೃತ ಸಂಸ್ಥೆಯಿಂದ ತಾವು ಕೊರೊನಾ ಮುಕ್ತ ಎನ್ನುವ ಬಗ್ಗೆ ಪ್ರಮಾಣ ಪತ್ರ ಹೊಂದಿರಬೇಕು.

    ಈಗಾಗಲೇ ಕೊಲ್ಲಿ ರಾಷ್ಟ್ರಗಳಿಂದ ಖಾಸಗಿ ವಿಮಾನಗಳಲ್ಲಿ ಕೇರಳ ಮೂಲದ ಅನಿವಾಸಿಗಳು ಆಗಮಿಸುತ್ತಿದ್ದು ಇದರಿಂದಾಗಿಯೇ ರಾಜ್ಯದಲ್ಲಿ ಕೊರೊನಾ ಹೆಚ್ಚುತ್ತಿದೆ ಎನ್ನುವ ಅಭಿಪ್ರಾಯ ಇದೆ. ಇದರ ಬದಲಿಗೆ, ಕೊರೊನಾ ಮುಕ್ತರಾಗಿ ಬರುವ ಮಂದಿಗಷ್ಟೇ ಇನ್ನು ರಾಜ್ಯಕ್ಕೆ ಬರಲು ಅವಕಾಶ ನೀಡಲು ನಿರ್ಧರಿಸಲಾಗಿದೆ. ಕೇಂದ್ರ ಸರಕಾರದ ವಂದೇ ಭಾರತ್ ಮಿಷನ್ ಅಡಿ ಆಗಮಿಸುವ ಮಂದಿಗೂ ಇದೇ ನಿಯಮ ಕಡ್ಡಾಯಗೊಳಿಸಬೇಕೆಂದು ಕೇಂದ್ರವನ್ನು ಕೇರಳ ಸರಕಾರ ಕೇಳಿಕೊ‌ಂಡಿದೆ.

    ಮೇ 7ರಿಂದ ಕೇರಳಕ್ಕೆ ವಿದೇಶಗಳಿಂದ ಜನ ಆಗಮಿಸಿದ ಬಳಿಕ ಕೇರಳದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಒಂದೇ ಸಮನೆ ಹೆಚ್ಚತೊಡಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply