Connect with us

  LATEST NEWS

  RSS ನಿಷೇಧಿಸಿ-ಮುಸ್ಲಿಂ ಪರಿಷತ್ ಒತ್ತಾಯ

  RSS ನಿಷೇಧಿಸಿ-ಮುಸ್ಲಿಂ ಪರಿಷತ್ ಒತ್ತಾಯ

  ಪುತ್ತೂರು ಸೆಪ್ಟೆಂಬರ್ 16: ರಾಜ್ಯದಲ್ಲಿ RSS ಹಾಗೂ ಭಜರಂಗದಳವನ್ನು ನಿಷೇಧಿಸಬೇಕೆಂದು ಪುತ್ತೂರು ಮುಸ್ಲಿಂ ಯುವಜನ ಪರಿಷತ್ ರಾಜ್ಯಸರಕಾರವನ್ನು ಒತ್ತಾಯಿಸಿದೆ.
  ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಪರಿಷತ್ ನ ತಾಲೂಕು ಮಾಜಿ ಅಧ್ಯಕ್ಷ ಅಶ್ರಫ್ ಕಲ್ಲೇಗ ಒರ್ವ ದಕ್ಷ, ಪ್ರಾಮಾಣಿಕ ಅಧಿಕಾರಿಯಾದ ಸಂಪ್ಯ ಎಸ್.ಐ ಅಬ್ದುಲ್ ಖಾದರ್ ಅವರ ವಿರುದ್ಧ ಈ ಸಂಘಟನೆಗಳು ನಿರಂತರವಾಗಿ ಆರೋಪಗಳನ್ನು ಮಾಡಿಕೊಂಡು ಬರುತ್ತಿದೆ ಎಂದು ಆರೋಪಿಸಿದರು.

  ಲವ್ ಜಿಹಾದ್ ಮತ್ತು ಗೋ ಸಾಗಾಟದ ವಿಚಾರದಲ್ಲಿ ಹಿಂದೂ ಸಂಘಟನೆಗಳು ಕೋಮು ಸಾಮರಸ್ಯಕ್ಕೆ ಧಕ್ಕೆ ತಂದೊಡ್ಡುತ್ತಿದ್ದಾರೆ ಎಂದರು. ಅಕ್ರಮ ಗೋಸಾಗಾಟದಲ್ಲಿ ಇದೇ ಭಜರಂಗದಳದ ಹಾಗೂ ಆರ್.ಎಸ್.ಎಸ್ ಕಾರ್ಯಕರ್ತರೇ ಭಾಗಿಯಾಗಿದ್ದಾರೆ.

  ಈ ಕುರಿತ ದಾಖಲೆಯೂ ತಮ್ಮ ಬಳಿಯಿದೆ ಎಂದು ಸ್ಪಷ್ಟಪಡಿಸಿದರು. ಮನೆಯವರನ್ನು ಬೆದರಿಸಿ ಹಟ್ಟಿಯಲ್ಲಿರುವ ಗೋವುಗಳನ್ನು ಕಳ್ಳತನ ಮಾಡುವವರಿಗೆ ಗುಂಡಿಕ್ಕಿ ಎಂದ ಅವರು ಹೇಳಿದರು.

  ಪತ್ರಿಕಾಗೋಷ್ಠಿಯಲ್ಲಿ ಪರಿಷತ್ ನ ತಾಲೂಕು ಅಧ್ಯಕ್ಷ ಸೂಫಿ ಬಪ್ಪಳಿಗೆ, ಪ್ರಧಾನ ಕಾರ್ಯದರ್ಶಿ ಪುತ್ತು ಶೇಟ್ ,ಯೂನಿಕ್ ಅಬ್ದುಲ್ ರಹಮಾನ್ ಉಪಸ್ಥಿತರಿದ್ದರು.

  Share Information
  Advertisement
  Click to comment

  You must be logged in to post a comment Login

  Leave a Reply