LATEST NEWS
ಕಾರ್ಗೋ ಶಿಫ್ ಡಿಕ್ಕಿಯಾಗಿ ಮುರಿದು ಬಿದ್ದ ಅಮೇರಿಕದ ಸೇತುವೆ

ವಾಷಿಂಗ್ಟನ್ ಮಾರ್ಚ್ 26 : ಪ್ರಮುಖ ಘಟನೆಯೊಂದರಲ್ಲಿ ಬೃಹತ್ ಸರಕು ಸಾಗಾಣಿಕೆ ಮಾಡುವ ಹಡಗೊಂದು ಡಿಕ್ಕಿ ಹೊಡೆದ ಪರಿಣಾಮ ಸೇತುವೆಯೊಂದು ಕುಸಿದು ಬಿದ್ದ ಘಟನೆ ಅಮೇರಿಕಾದ ಬಾಲ್ಟಿಮೋರ್ ಎಂಬಲ್ಲಿ ನಡೆದಿದೆ. ಬಾಲ್ಟಿಮೋರ್ ಬಂದರಿನಿಂದ ಹೊರಡುವ ನೌಕೆಯು ಮುಂಜಾನೆ 1:30 ರ ಸುಮಾರಿಗೆ ಬಾಲ್ಟಿಮೋರ್‌ನ ಕೀ ಸೇತುವೆಗೆ ಡಿಕ್ಕಿ ಹೊಡೆದಿದೆ. ಪರಿಣಾಮದ ಸಮಯದಲ್ಲಿ ಸೇತುವೆಯ ಮೇಲೆ ಹಲವಾರು ವಾಹನಗಳು ಪಟಾಪ್ಸ್ಕೋ ನದಿಗೆ ಮುಳುಗಿದವು. ಆ ಸಮಯದಲ್ಲಿ ಸೇತುವೆಯ ಮೇಲೆ ಕೆಲಸ ಮಾಡುವ ಮೇರಿಲ್ಯಾಂಡ್ ಸಾರಿಗೆ ಪ್ರಾಧಿಕಾರದ ಗುತ್ತಿಗೆದಾರರು ಇದ್ದರು ಎಂದು ಮೇರಿಲ್ಯಾಂಡ್ ಸಾರಿಗೆ ಕಾರ್ಯದರ್ಶಿ ಪಾಲ್ ವೈಡೆಫೆಲ್ಡ್ ಹೇಳಿದರು.
ಸೇತುವೆಗೆ ಕಾರ್ಗೋ ಹಡಗು ಬಂದು ಗುದ್ದುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗಿದೆ. ಅಗ್ನಿಶಾಮಕ ದಳ, ಪೊಲೀಸರು ಈಗ ರಕ್ಷಣೆಯಲ್ಲಿ ತೊಡಗಿದ್ದಾರೆ. ನೀರಿಗೆ ಬಿದ್ದ ಕಾರಿನಲ್ಲಿದ್ದ ಹಲವು ಮಂದಿ ನಾಪತ್ತೆಯಾಗಿದ್ದು ಶೋಧ ಕಾರ್ಯಾಚರಣೆ ನಡೆಯುತ್ತಿದೆ

ಸಿಂಗಾಪುರ ಮೂಲದ ಸರಕು ಸಾಗಾಣೆ ಹಡಗು ಗುದ್ದಿದ್ದು, 20ಕ್ಕೂ ಹೆಚ್ಚು ಕಾರುಗಳು ನೀರಿಗೆ ಬಿದ್ದಿವೆ ಎಂದು ವರದಿಯಾಗಿದೆ. ತಾಂತ್ರಿಕ ವೈಫಲ್ಯದಿಂದ ಘಟನೆ ನಡೆದಿದ್ಯಾ ಅಥವಾ ಉಗ್ರರ ಕೃತ್ಯ ಇರಬಹುದೇ ಈ ಕೋನದಲ್ಲಿ ಈಗ ಅಮೆರಿಕ ತನಿಖೆ ನಡೆಸುತ್ತಿದೆ
ಟಾಪ್ಸ್ಕೋ ನದಿಗೆ ಒಟ್ಟು 2.6 ಕಿ.ಮೀ ಉದ್ದದ ಸೇತುವೆಯನ್ನು ಕಟ್ಟಲಾಗಿದೆ. 1977 ರಲ್ಲಿ ಸೇತುವೆ ಉದ್ಘಾಟನೆಯಾಗಿದ್ದು ವಾರ್ಷಿಕ 1.1 ಕೋಟಿಗೂ ಅಧಿಕ ವಾಹನಗಳು ಸಂಚರಿಸುತ್ತಿವೆ. ಬಾಲ್ಟಿಮೋರ್ ಅಮೆರಿಕ ಪ್ರಮುಖ ಕೈಗಾರಿಕಾ ನಗರವಾಗಿದ್ದು ಈ ಸೇತುವೆಯನ್ನು ಒಳಗೊಂಡ ರಸ್ತೆ ಮಾರ್ಗ ಅಮೆರಿಕ ರಾಜಧಾನಿ ವಾಷಿಂಗ್ಟನ್ ಸಂಪರ್ಕಿಸುತ್ತದೆ.