Connect with us

    LATEST NEWS

    ಮೊದಲ ಬಾರಿ ವಿಶ್ವ ಸುಂದರಿ ಸ್ಪರ್ಧಾ ಕೂಟ ಪ್ರವೇಶಿಸಿದ ಸೌದಿ ಅರೇಬಿಯಾ..!

    ಸೌದಿ ಪರವಾಗಿ ಮಹಿಳೆಯೊಬ್ಬರು “ಮಿಸ್ ಯೂನಿವರ್ಸ್” ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ರೂಮಿ ಅಲ್ಖಾಹ್ತಾನಿ ಸೌಂದರ್ಯ ಸ್ಪರ್ಧೆಗಳಲ್ಲಿ ಸೌದಿ ಅರೇಬಿಯಾವನ್ನು ಪ್ರತಿನಿಧಿಸುತ್ತಿದ್ದು ಈಕೆ  ಸೌದಿ ಅರೇಬಿಯಾ ಇತಿಹಾಸದಲ್ಲೇ ಮೊದಲ ಮಿಸ್​ ಯೂನಿವರ್ಸ್ ಸ್ಪರ್ಧಿ ಎನಿಸಿಕೊಳ್ಳಲಿದ್ದಾರೆ.

    ರಿಯಾದ್ : ಸಾಂಪ್ರದಾಯಿಕ ಇಸ್ಲಾಮಿಕ್ ದೇಶವೆಂದೇ ಕರೆಯಲ್ಪಡುವ ‘ಸೌದಿ ಅರೇಬಿಯಾ’ ತನ್ನ ಮೂಲಭೂತವಾದವನ್ನು ನಿಧಾನವಾಗಿ ಸರಳೀಕರಿಸಿ ಅಧುನಿಕತೆಯತ್ತ ಮುಖ ಮಾಡುತ್ತಿದೆ.

    ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ಅವರು ದೇಶದ ಆಡಳಿತ ಚುಕ್ಕಾಣಿ ಹಿಡಿದ ನಂತರ ದೇಶದಲ್ಲಿ ಹಲವು ಬದಲಾವಣೆಗಳು ಜಾರಿಗೆ ಬರಲಾರಂಭಿಸಿದೆ. ವಿಶೇಷವಾಗಿ ಮಹಿಳೆಯರ ಮೇಲಿನ ನಿರ್ಬಂಧಗಳನ್ನು ರಾಜಾಡಳಿತ ತೆಗೆದು ಹಾಕಲು ಆರಂಭಿಸಿದೆ. ಇದರ ಭಾಗವಾಗಿ ಮಹಿಳೆಯರಿಗೆ ಮಹಿಳಾ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ಇದೇ ಮೊದಲ ಭಾಗಿ ಭಾಗವಹಿಸುತ್ತಿದೆ. ಸೌದಿ ಪರವಾಗಿ ಮಹಿಳೆಯೊಬ್ಬರು “ಮಿಸ್ ಯೂನಿವರ್ಸ್” ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ರೂಮಿ ಅಲ್ಖಾಹ್ತಾನಿ ಸೌಂದರ್ಯ ಸ್ಪರ್ಧೆಗಳಲ್ಲಿ ಸೌದಿ ಅರೇಬಿಯಾವನ್ನು ಪ್ರತಿನಿಧಿಸುತ್ತಿದ್ದಾಳೆ.

     

    ಈಕೆ ಸೌದಿ ಅರೇಬಿಯಾ ಇತಿಹಾಸದಲ್ಲೇ ಮೊದಲ ಮಿಸ್​ ಯೂನಿವರ್ಸ್ ಸ್ಪರ್ಧಿ ರೂಮಿ ಅಲ್ಖಾಹ್ತಾನಿ ಎನಿಸಿಕೊಳ್ಳಲಿದ್ದಾರೆ. 27 ವರ್ಷದ ರೂಪದರ್ಶಿ ರೂಮಿ ಸೋಮವಾರ ತಮ್ಮ ಇನ್‌ಸ್ಟಾಗ್ರಾಮ್ ಮೂಲಕ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಮೊದಲ ಮಹಿಳೆ ನಾನು ಎಂದು ರೂಮಿ ಹೇಳಿಕೊಂಡಿದ್ದಾರೆ. ” ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಸೌದಿ ಅರೇಬಿಯಾ ಭಾಗವಹಿಸುತ್ತಿರುವುದು ಇದೇ ಮೊದಲು” ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಸೌದಿ ರಾಜಧಾನಿ ರಿಯಾದ್‌ ನವರಾದ ಅಲ್ಕಹ್ತಾನಿ, ಕೆಲವು ವಾರಗಳ ಹಿಂದೆ ಮಲೇಷ್ಯಾದಲ್ಲಿ ನಡೆದ ಮಿಸ್ ಅಂಡ್ ಮಿಸೆಸ್ ಗ್ಲೋಬಲ್ ಏಷ್ಯನ್‌ನಲ್ಲಿ ಭಾಗವಹಿಸಿದ ಇತಿಹಾಸ ಸೃಷ್ಟಿಸಿದ್ದರು. ಅವರು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ದೇಶದ ಪ್ರಥಮ ಮಹಿಳೆಯಾಗಿದ್ದರು. ಈ ಮೂಲಕ ಸೌದಿ ಅರೇಬಿಯಾ ಕೂಡ ನಿಧಾನವಾಗಿ ಆಧುನಿಕತೆಗೆ ತೆರೆದುಕೊಳ್ಳುತ್ತಿದೆ. ಈಗಾಗಲೇ ಕಟ್ಟುನಿಟ್ಟಾದ ಮದ್ಯಪಾನ ನಿಷೇಧಕ್ಕೆ ಹೆಸರುವಾಸಿಯಾಗಿರುವ ಸೌದಿ ಅರೇಬಿಯಾ, ಮುಸ್ಲಿಮೇತರ ರಾಜತಾಂತ್ರಿಕರಿಗೆ ಮದ್ಯವನ್ನು ಖರೀದಿಸಲು ಅನುಮತಿ ನೀಡಿದೆ. ಇದರ ಜೊತೆಗೆ ಮಹಿಳೆಯರಿಗೆ ವಾಹನ ಚಲಾಯಿಸಲು, ಗಂಡು-ಹೆಣ್ಣು ಒಟ್ಟಾಗಿ ಕಾರ್ಯಕ್ರಮಗಳಿಗೆ ಹಾಜರಾಗಲು ಮತ್ತು ಪುರುಷ ಪಾಲಕತ್ವವಿಲ್ಲದೆ ಪಾಸ್‌ಪೋರ್ಟ್‌ಗಳಿಗೆ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply