KARNATAKA
ಬಜರಂಗದಳ ನಿಷೇಧ ಪ್ರಸ್ತಾಪ: ನಾಳೆ ರಾಜ್ಯಾದ್ಯಂತ ಹನುಮಾನ್ ಚಾಲಿಸಾ ಪಠಣ
ಬೆಂಗಳೂರು, ಮೇ 02: ಬಜರಂಗದಳವನ್ನು ನಿಷೇಧಿಸುವ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಭರವಸೆಯ ವಿರುದ್ಧ ಹಿಂದೂ ಸಂಘಟನೆಗಳು ಸಿಡಿದೆದ್ದಿದ್ದು, ಇದರ ವಿರುದ್ಧ ಆಂದೋಲನ ನಡೆಸಲು ಮುಂದಾಗಿವೆ. ಬಜರಂಗದಳ ಸಂಘಟನೆಯು ಮೇ 4ರಂದು ರಾಜ್ಯಾದ್ಯಂತ ಹನುಮಾನ್ ಚಾಲಿಸಾ ಪಠಣವನ್ನು ಆಯೋಜಿಸಿದೆ.
ಬಜರಂಗದಳ ಮೇ 4ರಂದು ಸಂಜೆ 7 ಗಂಟೆಗೆ ರಾಜ್ಯದಾದ್ಯಂತ ಸಾಮೂಹಿಕ ಹನುಮಾನ್ ಚಾಲೀಸಾ ಪಠಣವನ್ನು ಆಯೋಜಿಸಿದೆ. ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸಾ ಪಠಣ ನಡೆಸಲಾಗುತ್ತದೆ.
ಇದು ಧರ್ಮಕ್ಕೆ ಸಂಕಟವೆರಗಿರುವ ಸಮಯ. ಒಟ್ಟಾಗಿ ನಿಲ್ಲುವುದೊಂದೇ ಪರಿಹಾರ. ನಮ್ಮೆಲ್ಲ ಭೇದಗಳನ್ನು ಒತ್ತಟ್ಟಿಗಿಟ್ಟು ಧರ್ಮರಕ್ಷಣೆಗೆ ಜೊತೆಯಾಗೋಣ, ಕೈ ಜೋಡಿಸೋಣʼʼ ಎಂದು ಬಜರಂಗ ದಳ ಪ್ರಕಟಣೆ ತಿಳಿಸಿದೆ.
ಮಂಗಳವಾರ ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಸಮಾಜ ವಿರೋಧಿ ಕೃತ್ಯಗಳಲ್ಲಿ ತೊಡಗಿದರೆ ಬಜರಂಗ ದಳ, ಪಿಎಫ್‌ಐ ಸೇರಿದಂತೆ ಸಂಘಟನೆಗಳನ್ನು ನಿಷೇಧಿಸುವ ಪ್ರಸ್ತಾಪವನ್ನು ಮಾಡಲಾಗಿದೆ. ಇದರ ವಿರುದ್ಧ ರಾಜ್ಯಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು.