Connect with us

UDUPI

ಶ್ವಾಸಕೋಶ ಸೇರಿದ ಹಾಲು….ಕಾರ್ಕಳದ 10 ತಿಂಗಳ ಮಗು ಸಾವಿಗೆ ಕಾರಣ…!!

ಉಡುಪಿ ಜುಲೈ 4: ಉಡುಪಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದ ಹತ್ತು ತಿಂಗಳ ಮಗುವಿನ ವೈದ್ಯಕೀಯ ವರದಿ ಜಿಲ್ಲಾ ಆರೋಗ್ಯಾಧಿಕಾರಿಗಳ ಕೈಸೇರಿದೆ. ಜ್ವರ ಮತ್ತು ಉಸಿರಾಟ ತೊಂದರೆಯಾಗಿ ಸಾವನ್ನಪ್ಪಲು ಎದೆಹಾಲು ಕಾರಣ ಅಂತ ವೈದ್ಯರು ಹೇಳಿದ್ದಾರೆ.


ಸಾವನ್ನಪ್ಪಿದ ಮಗುವನ್ನು ಕಾರ್ಕಳದ ಮಿಯಾರು ಗ್ರಾಮದಲ್ಲಿ ನೆಲೆಸಿರುವ ಮೂಲತಃ ವಿಜಯಪುರ ಜಿಲ್ಲೆಯ ದಂಪತಿಯ ಮಗು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಏಪ್ರಿಲ್ ತಿಂಗಳಲ್ಲಿ ವಿಜಯಪುರಕ್ಕೆ ಹೋದ ದಂಪತಿ ಹತ್ತು ದಿನಗಳ ಹಿಂದೆ ವಾಪಸ್ ಆಗಿದ್ದರು. ಜೂನ್ 28 ರಂದು ಮಗುವಿಗೆ ಜ್ವರ ಕಾಣಿಸಿಕೊಂಡಿತ್ತು. ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ತಾಲೂಕು ಆಸ್ಪತ್ರೆಗೆ ಮಗುವನ್ನು ಕರೆ ತರುವಾಗ ಸಾವು ಸಂಭವಿಸಿದೆ. ಕೊರೊನಾ ಸಂದರ್ಭದಲ್ಲಿ ಮೃತಪಟ್ಟಿರುವ ಕಾರಣ ಮಗುವಿನ ಗಂಟಲ ದ್ರವ ಪರೀಕ್ಷೆಗಾಗಿ ರವಾನಿಸಲಾಗಿತ್ತು.

ಕೆಎಂಸಿ ಲ್ಯಾಬ್‍ನ ವರದಿ ಜಿಲ್ಲಾಡಳಿತ ದ ಕೈಸೇರಿದೆ. ತಾಯಿ 10 ತಿಂಗಳ ಮಗುವಿಗೆ ಮಲಗಿದಲ್ಲಿಗೆ ಎದೆಹಾಲು ಕೊಟ್ಟಿದ್ದರು. ಹಾಲು ಮಗುವಿನ ಶ್ವಾಸಕೋಶದಲ್ಲಿ ಸಿಕ್ಕಿಹಾಕಿ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಪುಟ್ಟ ಮಕ್ಕಳಿಗೆ ಮಲಗಿದಲ್ಲಿಗೆ ಎದೆಹಾಲು ಕೊಡಬಾರದು ಎಂದು ಸಲಹೆ ನೀಡಿದ್ದಾರೆ.

Facebook Comments

comments