Connect with us

UDUPI

ಉಡುಪಿ ಜಿಲ್ಲೆಯಲ್ಲಿ ಇಂದು 19 ಕೊರೊನಾ ಪಾಸಿಟಿವ್

ಉಡುಪಿ ಜುಲೈ 4: ಉಡುಪಿ ಜಿಲ್ಲೆಯಲ್ಲಿ ಇಂದು 19 ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯ ಒಟ್ಟು ಕೊರೊನಾ ಪ್ರಕರಣ ಸಂಖ್ಯೆ 1277 ಕ್ಕೆ ಏರಿಕೆಯಾಗಿದೆ. ಇಂದು ಪತ್ತೆಯಾದ ಪ್ರಕರಣಗಳಲ್ಲಿ ಮಹಾರಾಷ್ಟ್ರ- 1, ಅನ್ಯಜಿಲ್ಲೆ- 3, ಪ್ರಾಥಮಿಕ ಸಂಪರ್ಕ-14, ಸಂಪರ್ಕ ಪತ್ತೆಯಾಗದ ಪ್ರಕರಣ-1 , ಹಾಗೂ ರಾಂಡಮ್ ಚೆಕ್ಕಿಂಗ್ ನಲ್ಲಿ ಓರ್ವ ಅಟೋ ಡ್ರೈವರ್ ಗೂ ಕೊರೊನಾ ಸೋಂಕು ಪತ್ತೆಯಾಗಿದೆ.


ಇಂದು ಉಡುಪಿ ಜಿಲ್ಲೆಯಲ್ಲಿ 10 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇಲ್ಲಿಯವರೆಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು ಡಿಸ್ವಾರ್ಜ್ ಆದ ರೋಗಿಗಳು-1114, ಜಿಲ್ಲೆಯಲ್ಲಿ ಸದ್ಯ 160 ಸಕ್ರಿಯ ಪ್ರಕರಣಗಳಿವೆ ಎಂದು ಡಿಎಚ್ ಒ ಡಾ.ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.