Connect with us

    BANTWAL

    ಆಟೋರಿಕ್ಷಾ ಪಲ್ಟಿ ಓರ್ವ ಸಾವು – 7 ಮಂದಿಗೆ ಗಾಯ

    ಬಂಟ್ವಾಳ: 7ಕ್ಕೂ ಅಧಿಕ ಮಂದಿ ಪ್ರಯಾಣಿಕರನ್ನು ಹೊತ್ತು ಸಂಚರಿಸುತ್ತಿದ್ದ ಆಟೋ ರಿಕ್ಷಾವೊಂದು ಪಲ್ಟಿಯಾಗಿ ಓರ್ವ ಸಾವನಪ್ಪಿರುವ ಘಟನೆ ಮಣಿಹಳ್ಳ ಸರಪಾಡಿ ರಸ್ತೆಯ ಪೆರಿಯಪಾದೆ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.


    ವಲೆಂಗೂರು ನಿವಾಸಿ ಫ್ರಾನ್ಸಿಸ್ ಸುವಾರಿಸ್ (85) ಮೃತಪಟ್ಟ ದುರ್ದೈವಿ. ಘಟನೆಯಲ್ಲಿ ಇಬ್ಬರು ಗಂಭೀರ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆ ಗೆ ದಾಖಲಾಗಿದ್ದಾರೆ, ಅಲ್ಪಸ್ವಲ್ಪ ಗಾಯಗೊಂಡವರು ಬಂಟ್ವಾಳ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸರಪಾಡಿಯಿಂದ ಬಂಟ್ವಾಳ ಕಡೆಗೆ ಹಲವು ಮಂದಿ ಪ್ರಯಾಣಿಕರನ್ನು ಕರೆತರುವ ವೇಳೆ ಅಟೋರಿಕ್ಷಾವೂ ಪರಿಯಪಾದೆ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply