DAKSHINA KANNADA
ಓಲಾ-ಉಬರ್ ಕಾರುಗಳ ಓಡಾಟ ಖಂಡಿಸಿ ರಿಕ್ಷಾ ಚಾಲಕರ ಪ್ರತಿಭಟನೆ
ಓಲಾ-ಉಬರ್ ಕಾರುಗಳ ಓಡಾಟ ಖಂಡಿಸಿ ರಿಕ್ಷಾ ಚಾಲಕರ ಪ್ರತಿಭಟನೆ
ಮಂಗಳೂರು, ಅಕ್ಟೋಬರ್ 10 :ಓಲಾ ಮತ್ತು ಉಬರ್ ಕಾರುಗಳ ಅನಾಧಿಕೃತ ಮತ್ತು ಕಾನೂನು ಬಾಹಿರ ಓಡಾಟವನ್ನು ವಿರೋಧಿಸಿ ಅಟೋ ಚಾಲಕರು ಮತ್ತು ಮಾಲಕರು ಇಂದು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.
ಮಂಗಳೂರು ನಗರ ಆಟೋ ಚಾಲಕ- ಮಾಲಕರ ಒಕ್ಕೂಟದ ಕರೆಯಂತೆ ಅಟೋ ಚಾಲಕರು ತಮ್ಮ ಅಟೋಗಳನ್ನು ರಸ್ತೆಗಿಳಿಸದೆ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಮಂಗಳೂರಿನ ಕ್ಲಾಕ್ ಟವರಿನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಜಾಥಾ ನಡೆಸಿದ ಚಾಲಕರು ಸರ್ಕಾರದ ಮತ್ತು ಸ್ತಳೀಯಾಡಳಿತದ ನೀತಿಯನ್ನು ಖಂಡಿಸಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಿವಿಧ ಆಟೋ ಚಾಲಕ- ಮಾಲಕ ಸಂಘದ ಮುಖಂಡರುಗಳು ಕಳೆದ 8 ದಶಕಗಳಿಂದ ಮಂಗಳೂರಿನ ಜನತೆಗೆ ಆಟೋ ಚಾಲಕರು ಉತ್ತಮ ಸೇವೆಯನ್ನು ನೀಡಿದ್ದಾರೆ. ಇದೀಗ ಸರ್ಕಾರ ನಗರದಲ್ಲಿ ಓಲಾ-ಉಬರ್ ನಂತಹ ಸಂಸ್ಥೆಗಳಿಗೆ ಟ್ಯಾಕ್ಸಿ ಸೇವೆಗೆ ಪರವಾನಿಗೆ ನೀಡಿದ ಹಿನ್ನೆಲೆಯಲ್ಲಿ ಆಟೊ ಚಾಲಕರು ಕಂಗಲಾಗಿದ್ದಾರೆ.
ಅಲ್ಪ ಸ್ವಲ್ಲ ಆಗುತ್ತಿದ್ದ ದುಡಿಮೆಗೆ ಓಲಾ ಉಬೆರ ಗಳು ಕಲ್ಲು ಹಾಕಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ. ಇವುಗಳನ್ನು ಮಟ್ಟ ಹಾಕಲು ಆಟೋಗಳು ಸಂಘಟನೆಗಳು ಯಾವುದೇ ತ್ಯಾಗಕ್ಕೂ ಸಿದ್ದವಾಗಿವೆ. ಸರ್ಕಾರ ಇದಕ್ಕೆ ಆಸ್ಪದ ನೀಡಬಾರದು ಎಂದರು.
ಪ್ರತಿಭಟನೆಯಲ್ಲಿ ವಿವಿಧ ಆಟೋ ಸಂಘಟನೆಗಳು ಪಾಲ್ಗೊಂಡಿದ್ದರು. ಹೆಚ್ ಎಮ್ ಎಸ್ ಸಂಘಟನೆಯ ಗೌರವಧ್ಯಕ್ಷ ಅಶೋಕ್ ಶೆಟ್ಟಿ, ಸಿಐಟಿಯುನ ಮಹಮ್ಮದ್ ಇರ್ಫಾನ್,ಅಲ್ಪ ಸಂಖ್ಯಾತ ಆಟೋ ಚಾಲಕ ಸಂಘದ ಅಲಿ ಹಸನ್, ಸಂದೀಪ್, ಸುಭಾಷ್ ಕಾವೂರು ಅವರು ಮಾತನಾಡಿದರು.
You must be logged in to post a comment Login