BANTWAL
ಬಂಟ್ವಾಳ : ಆಟೋ ಚಾಲಕನಿಗೆ ಚೂರಿ ಇರಿತ
ಬಂಟ್ವಾಳ ಆಗಸ್ಟ್,18: ಆಟೋ ರಿಕ್ಷಾ ಚಾಲಕನಿಗೆ ಸಾರ್ವಜನಿಕರ ಎದುರಲ್ಲೇ ವ್ಯಕ್ತಿಯೋರ್ವ ಚೂರಿಯಿಂದು ಇರಿದು ಗಾಯಗೊಳಿಸಿದ ಘಟನೆ ಬಂಟ್ವಾಳ ತಾಲೂಕಿನ ಉರಿಮಜಲು ಜಂಕ್ಷನ್ ನಲ್ಲಿ ಭಾನುವಾರ ನಡೆದಿದೆ.
ಎಂಎಂಎಸ್ ಆಟೋ ಚಾಲಕ ಶರೀಫ್ ಗಾಯಗೊಂಡವರು. ಕಾರ್ಯಡಿ ನಿವಾಸಿ ಆಪೀ ಚೂರಿ ಇರಿತದ ಆರೋಪಿಯಾಗಿದ್ದಾನೆ. ಇಡ್ಕಿದು ಪಂಚಾಯತ್ ಎದುರಲ್ಲಿ ಈ ಘಟನೆ ಸಂಭವಿಸಿದೆ. ಗಾಯಗೊಂಡಿರುವ ಶರೀಫ್ ರನ್ನು ಸ್ಥಳೀಯರು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.
You must be logged in to post a comment Login