LATEST NEWS
ಮಂಗಳೂರು : ಪಚ್ಚನಾಡಿ ಸಂತೋಷ್ ನಗರಕ್ಕೆ ನೂತನ ಅಂಗನವಾಡಿ ಕಟ್ಟಡ, ಶಾಸಕ ಡಾ. ಭರತ್ ಶೆಟ್ಟಿಯವರಿಂದ ಶಿಲಾನ್ಯಾಸ
ಮಂಗಳೂರು : ಮಂಗಳೂರು ಮಹಾನಗರ ಪಾಲಿಕಯ ಪಚ್ಚನಾಡಿ ಸಂತೋಷ್ ನಗರಕ್ಕೆ ನೂತನ ಅಂಗನವಾಡಿ ಕಟ್ಟಡ ಮಂಜೂರಾಗಿದ್ದು ಶಾಸಕ ಡಾ. ಭರತ್ ಶೆಟ್ಟಿ ಯವರು ಶಿಲಾನ್ಯಾಸ ನೆರವೇರಿಸಿದರು.
ಗೇಲ್ ಗ್ಯಾಸ್ ಕಂಪೆನಿ ಲಿಮಿಟೆಡ್ ಕಂಪೆನಿಯವರು ಸಿ ಎಸ್ ಆರ್ ನಿಧಿಯಡಿ ಸಂತೋಷ್ ನಗರದಲ್ಲಿ ನೂತನ ಸುಸಜ್ಜಿತ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ 25 ಲಕ್ಷ ರೂ ಅನುದಾನ ಒದಗಿಸಿದ್ದು, ಇದರ ಶಿಲಾನ್ಯಾಸ (ಭೂಮಿ ಪೂಜೆ) ಕಾರ್ಯಕ್ರಮವು ಇಂದು ಆಯೋಜಿಸಲಾಗಿದ್ದು ಮಂಗಳೂರು ಉತ್ತರ ಶಾಸಕರಾದ ಡಾ ಭರತ್ ಶೆಟ್ಟಿ ಯವರು ನೆರವೇರಿಸಿದರು. ಈ ಸಂದರ್ಭ ಪೂಜ್ಯ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು , ಉಪ ಮೇಯರ್ ಕು! ಸುನೀತಾ , ಕಾರ್ಪೊರೇಟರ್ ಸಂಗೀತಾ ಆರ್ ನಾಯಕ್ ಗೇಲ್ ಕಂಪೆನಿಯ ಚೀಫ್ ಮ್ಯಾನೇಜರ್ ಸುಮಿತ್ , ಉಪಸ್ಥಿತರಿದ್ದರು. ಇವರಿಗೆ ಜಿಲ್ಲಾ ಉಪಾಧ್ಯಕ್ಷೆ ಪೂಜಾ ಪ್ರಶಾಂತ್ ಪೈ, ಮಂಡಲ ಪ್ರಧಾನ ಕಾರ್ಯದರ್ಶಿ ಸಂದೀಪ್ ಬೋಂದೆಲ್, ವಾರ್ಡ್ ಅಧ್ಯಕ್ಷರಾದ ಶಿವಾಜಿ ಕುಲಾಲ್, ಬೂತ್ ಅಧ್ಯಕ್ಷರಾದ ಅನಿಲ್ ಕುಮಾರ್, ಸ್ಥಳೀಯರಾದ ವಿಜಯ್ ಶೆಟ್ಟಿ, ಜಗದೀಶ್ ಮುಂಡ ಪೂಜಾರಿ, ತನಿಯಪ್ಪ, ಸಂದೇಶ್ ಪೂಜಾರಿ, ರತೀಶ್, ವಿಜಯ್, ಅಂಗನವಾಡಿ ಶಿಕ್ಷಕಿ ಜ್ಯೋತಿ, ನಿಕಟಪೂರ್ವ ಶಿಕ್ಷಕಿ ಭವಾನಿ ಅಂಚನ್ ಮತ್ತಿತರರು ಸಾಥ್ ನೀಡಿದರು. ಪಕ್ಷದ ಪ್ರಮುಖರು, ಕಾರ್ಯಕರ್ತರು, ಹಿತೈಷಿಗಳು, ಸ್ಥಳೀಯ ನಿವಾಸಿಗಳು ಹಾಜರಿದ್ದರು.
You must be logged in to post a comment Login