Connect with us

    LATEST NEWS

    ಅತ್ತಾವರ ಪ್ಲ್ಯಾಟ್ ವೊಂದರಲ್ಲಿ ನಲ್ಲಿ ಬೆಂಕಿ ಆಕಸ್ಮಿಕ – ಮಹಿಳೆಗೆ ಗಂಭೀರ ಗಾಯ

    ಮಂಗಳೂರು, ನವೆಂಬರ್ 28: ಅತ್ತಾವರ ಸಮೀಪದ ಅಪಾರ್ಟ್ಮೆಂಟ್ ಒಂದರ ಪ್ಲ್ಯಾಟ್ ನಲ್ಲಿ ಬೆಂಕಿ ಆಕಸ್ಮಿಕ ಘಟನೆ ನಡೆದಿದ್ದು, ಓರ್ವ ಮಹಿಳೆಗೆ ಗಂಭೀರ ಗಾಯಗಳಾದ ಬಗ್ಗೆ ವರದಿಯಾಗಿದೆ.


    ನಗರದ ಅತ್ತಾವರದ ಐವರಿ ಟವರ್‌ನಲ್ಲಿ‌ ಮಂಗಳವಾರ ಬೆಳಗ್ಗೆ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಅನಾಹುತ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲ ಮಹಿಳೆಯೊಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯಲ್ಲಿ ಹಲವು ಮಂದಿಯಿದ್ದು, ಘಟನೆ ಸಂಭವಿಸಿದ ತಕ್ಷಣ ಅವರು ಹೊರಗೆ ಬಂದು ಪಾರಾಗಿದ್ದಾರೆ. ಬೆಂಕಿ ಅನಾಹುತದಿಂದ ಮನೆಯೊಳಗಿನ ಪೀಠೋಪಕರಣ ಗಳು ಸುಟ್ಟು ಕರಕಲಾಗಿವೆ ಎಂದು ಪಾಂಡೇಶ್ಚರ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply