LATEST NEWS
ಪ್ರತಿ ತಿಂಗಳು ಕೇವಲ 3 ಬಾರಿ ಮಾತ್ರ ATM ನಿಂದ ಹಣ ಡ್ರಾಗೆ ಶುಲ್ಕ ಇಲ್ಲ.. ಬಳಿಕ ಪ್ರತಿ ಹೆಚ್ಚುವರಿ ವಹಿವಾಟಿಗೆ 25 ರೂಪಾಯಿ ಶುಲ್ಕ
ಮಂಗಳೂರು ಫೆಬ್ರವರಿ 03: ಫೆಬ್ರವರಿಯಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭಾರೀ ಬದಲಾವಣೆಯಾಗಿದೆ. ಪ್ರಮುಖವಾಗಿ ಎಟಿಎಂ ಹಣ ಡ್ರಾ ನಿಯಮ ಹಾಗೂ ಯುಪಿಐ ಪಾವತಿ ವಿಚಾರದಲ್ಲಿ ಬದಲಾವಣೆಯಾಗಿದೆ. ಕೇಂದ್ರ ಬಜೆಟ್ ಮಂಡನೆ ಬೆನ್ನಲ್ಲೇ ದೇಶದಲ್ಲಿ ಎಟಿಎಂ ಡ್ರಾ ಹಾಗೂ ಯುಪಿಐ ಪಾವತಿ ನಿಯಮದಲ್ಲಿ ಮಹತ್ವದ ಬದಲಾವಣೆಯಾಗಿದೆ.
ಎಟಿಎಂ ನಗದು ಡ್ರಾ ಉಚಿತ ಲಿಮಿಟ್ 3 ಮಾತ್ರ
ಎಟಿಎಂ ನಿಂದ ಹಣ ಹಿಂಪಡೆಯುವ ಉಚಿತ ಅವಕಾಶ ಕೇವಲ ಮೂರು ಮಾತ್ರ , ನಂತರ ಹಣ ಡ್ರಾ ಮಾಡಿದರೆ ಪ್ರತಿಯೊಂದು ವಹಿವಾಟಿಗೆ 25 ರೂಪಾಯಿ ಹೆಚ್ಚುವರಿ ಶುಲ್ಕ ಕಟ್ಟಬೇಕು. ಅಂದರೆ ಉಚಿತ ಡ್ರಾ ಲಿಮಿಟ್ ಬಳಿಕ ನೀವು 100 ರೂಪಾಯಿ ಹಣ ತೆಗೆದರೆ ಬ್ಯಾಂಕ್ 25 ರೂಪಾಯಿಯನ್ನ ಶುಲ್ಕವಾಗಿ ನಿಮ್ಮ ಅಕೌಂಟ್ ನಿಂದ ಕಟ್ ಆಗುತ್ತದೆ. ಅಲ್ಲದೆ ಪ್ರತಿದಿನ ಇನ್ನುಮುಂದೆ ಎಟಿಎಂ ನಿಂದ ಕೇವಲ 50,000 ರೂಪಾಯಿ ಮಾತ್ರ ಹಣ ಪಡೆಯಬಹುದಾಗಿದೆ.
ಯುಪಿಐ ವಹಿವಾಟುಗಳಿಗೆ ಹೊಸ ಮಾರ್ಗಸೂಚಿಗಳನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಬಿಡುಗಡೆ ಮಾಡಿದೆ. ವಹಿವಾಟು ಐಡಿಯಲ್ಲಿ ವಿಶೇಷ ಅಕ್ಷರಗಳು (@, #, $, ಇತ್ಯಾದಿ) ಇನ್ನು ಮುಂದೆ ಸ್ವೀಕಾರಾರ್ಹವಲ್ಲ. ಆಲ್ಫಾನ್ಯೂಮರಿಕ್ ಐಡಿಗಳು ಮಾತ್ರ (az, 0-9) ಸ್ವೀಕಾರಾರ್ಹವಾಗಿರುತ್ತವೆ. ಐಡಿಯಲ್ಲಿ ವಿಶೇಷ ಅಕ್ಷರಗಳನ್ನು ಹೊಂದಿರುವ ವಹಿವಾಟುಗಳನ್ನು ತಿರಸ್ಕರಿಸಲಾಗುತ್ತದೆ.
ಉಳಿತಾಯ ಖಾತೆಗಳ ಮೇಲಿನ ಬಡ್ಡಿದರಗಳಲ್ಲಿ ಹೆಚ್ಚಳ. ಎಸ್‌ಬಿಐ, ಪಿಎನ್‌ಬಿ ಮತ್ತು ಇತರರು ಬಡ್ಡಿದರಗಳನ್ನು ಶೇಕಡಾ 3 ರಿಂದ 3.5 ಕ್ಕೆ ಹೆಚ್ಚಿಸಿದ್ದಾರೆ ಮತ್ತು ಹಿರಿಯ ನಾಗರಿಕರಿಗೆ ಹೆಚ್ಚುವರಿ ಶೇಕಡಾ 0.5 ಬಡ್ಡಿಯನ್ನು ನೀಡಲಾಗುತ್ತದೆ. ಕನಿಷ್ಠ ಬ್ಯಾಲೆನ್ಸ್ ಕೂಡ ಹೆಚ್ಚಿಸಲಾಗಿದೆ: ಎಸ್‌ಬಿಐ ಈಗ ರೂ 5000 (ಹಿಂದಿನ ರೂ 3000), ಪಿಎನ್‌ಬಿ ರೂ 3500 (ಹಿಂದಿನ ರೂ 1000) ಮತ್ತು ಕೆನರಾ ಬ್ಯಾಂಕ್ ಈಗ ರೂ 2500 (ಹಿಂದಿನ ರೂ 1000) ಬೇಡಿಕೆ ಮಾಡುತ್ತದೆ. ಕನಿಷ್ಠ ಮೊತ್ತಕ್ಕಿಂತ ಕಡಿಮೆ ಬ್ಯಾಲೆನ್ಸ್ ಹೊಂದಿರುವ ಖಾತೆದಾರರಿಗೆ ದಂಡದ ಮೊತ್ತವನ್ನು ವಿಧಿಸಲಾಗುತ್ತದೆ.
ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯಲ್ಲಿ 7 ರೂಪಾಯಿ ಇಳಿಕೆಯಾಗಿದೆ. ಆದರೆ ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ. ಸತತ ಎರಡನೇ ತಿಂಗಳು ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆಯಾಗಿದೆ. ಫೆಬ್ರವರಿ 1, 2025 ರಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 1797 ರೂ.ಗೆ ಇಳಿಸಲಾಗಿದೆ.