Connect with us

    KARNATAKA

    ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

    ಲಬುರಗಿ: ಮತ ಹಾಕದಿದ್ದರೂ ಪರ್ವಾಗಿಲ್ಲ. ತಾವು ಸತ್ತಾಗ ಮಣ್ಣಿಗಾದರೂ ( ಅಂತ್ಯಕ್ರಿಯೆ ಗೆ) ಬನ್ನಿ ಎಂಬ ಭಾವನಾತ್ಮಕ ಹೇಳಿಕೆ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತಯಾಚಿಸಿದರು.

    ಅಫ್ಜಜಲ್‍ಪುರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಮತ ಹಾಕೋಕೆ ಬರದೇ ಇದ್ದರು ಕೂಡ ನಾನು ಸತ್ತ ಮೇಲೆ ಮಣ್ಣಿಗೆ ಬರಬೇಕು ನೀವು. ನಾನು ಸತ್ತರೆ ನಮ್ಮ ಕೆಲಸ ನೆನಪು ಮಾಡಿಕೊಂಡು ಮಣ್ಣು ಹಾಕೋಕೆ ಬನ್ನಿ. ಸತ್ತಾಗ ಸುಟ್ಟರೆ ಮೇಣದ ಬತ್ತಿ ಹಚ್ಚೋಕೆ ಬನ್ನಿ, ಹೂಳಿದ್ರೆ ಮಣ್ಣು ಹಾಕೋಕೆ ಬನ್ನಿ. ಆವಾಗ ನೋಡಪ್ಪ ಆತನ ಮಣ್ಣಿಗೆ ಎಷ್ಟು ಜನ ಬಂದ್ರು ಅಂತಾನಾದ್ರು ಹೇಳಬೇಕು ಎಂದು ಹೇಳುತ್ತಾ ಭಾವುಕರಾಗಿದ್ದಾರೆ.

    ನನಗೆ ಕಳೆದ ಬಾರಿ ಸೋಲಾಯ್ತು ಆಗಲಿ, ಸೋಲಾದ್ರು ದೊಡ್ಡ ಸ್ಥಾನ ಸಿಕ್ಕಿದೆ. ನಿಮ್ಮ ವೋಟು ನನಗೆ ತಪ್ಪಿದ್ರೆ ನಿಮ್ಮ ಹೃದಯ ಗೆಲ್ಲೋದಕ್ಕೆ ನನಗೆ ಸಾಧ್ಯ ಆಗಲಿಲ್ಲ ಅಂತಾ ತಿಳಿದುಕೊಳ್ಳುತ್ತೇನೆ ಎಂದರು. ಕಾಂಗ್ರೆಸ್‍ನವರು ದೇಶಕ್ಕಾಗಿ ಪ್ರಾಣ ಸಹ ಕೊಟ್ಟಿದ್ದಾರೆ. ಇವರ ಮನೆಯಲ್ಲಿ ಒಂದು ಇಲಿ ಸಹ ಸತ್ತಿಲ್ಲ. ಕಾಂಗ್ರೆಸ್ ಸಂವಿಧಾನ ಉಳಿಸುವ ಕೆಲಸ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಮೋದಿ ಅವರು ಸೋಲೆ ಸೋಲುತ್ತಾರೆ. ವಾರಣಾಸಿಯಲ್ಲಿ ಗೆಲ್ಲುವುದಕ್ಕೆ ದಾರಿ ಮಾಡಿಕೊಂಡಿದ್ದಾರೆ. ಅಬ್ ಕೀ ಬಾರ್ 400 ಪಾರ್ ಅಂತಾರೆ. ಆದರೆ ನಾವು 200 ಸಹ ಪಾರ್ ಮಾಡಲ್ಲ. ಅದನ್ನ ನಾವು ತಡೆಯುವುದರಲ್ಲಿ ಎರಡು ಮಾತಿಲ್ಲ ಎಂದರು.

    ನಾನು ಹುಟ್ಟಿದೆ ರಾಜಕಾರಣಕ್ಕಾಗಿ ಹೀಗಾಗಿ ಕೊನೆ ಚುನಾವಣೆ ಇಲ್ಲ. ರಿಟೈಡ್ ಆಗುವುದೇ ಇಲ್ಲ ಸಂವಿಧಾನ ಉಳಿಸಲು ತತ್ವ. ಇದನ್ನು ಉಳಿಸಲು ಕೊನೆ ಉಸಿರು ಇರುವವರೆಗೆ ಹೋರಾಟ ನಡೆಸುತ್ತೇವೆ. ನಾಳೆ ಸಿದ್ದರಾಮಯ್ಯ ಸಿಎಂ ಸಾಕು ರಿಟೈಡ್ ಅಂತಾ ಸಹ ಅನ್ನಬಹುದು. ಆದರೆ ತತ್ವ ಸಿದ್ಧಾಂತಗಳಿಗಾಗಿ ಕೊನೆಯುಸಿರು ಇರುವರೆಗೆ ಹೋರಾಟ ನಡೆಸುವುದಾಗಿ ಖರ್ಗೆ ಹೇಳಿದರು.

    ಇದನ್ನು ಓದಿ…

    ದ್ವೇಷದ ಕಂದಕಕ್ಕೆ ದೂಡಿದ್ದ ಬಿಜೆಪಿಯಿಂದ ಸಾಮರಸ್ಯದ ತುಳುನಾಡನ್ನು ರಕ್ಷಿಸಲು ಇದು ಕೊನೆಯ ಅವಕಾಶ: ಪದ್ಮರಾಜ್ ರಾಮಯ್ಯ ಪೂಜಾರಿ

    Share Information
    Advertisement
    Click to comment

    Leave a Reply

    Your email address will not be published. Required fields are marked *