LATEST NEWS
ಮದುವೆಯಾಗಲು ನಿರಾಕರಿಸಿದ್ದಕ್ಕೆ ಪ್ರಿಯಕರನ ಮೇಲೆ ಆಯಸಿಡ್ ಎರಚಿದ ಯುವತಿ…!
ಲಖನೌ: ತನಗೆ ಕೈಕೊಟ್ಟು ಬೇರೊಂದು ಯುವತಿಯನ್ನು ಮದುವೆಯಾಗಲು ಮುಂದಾಗಿದ್ದ ಯುವಕನ ಮುಖಕ್ಕೆ ಆಯಸಿಡ್ ಎರಚಿ ಪ್ರೇಯಸಿ ಸೇಡು ತೀರಿಸಿಕೊಂಡಿರುವ ಘಟನೆ ಉತ್ತರಪ್ರದೇಶದ ಬಲ್ಲಿಯಾದಲ್ಲಿ ನಡೆದಿದೆ. ಘಟನೆಯಲ್ಲಿ ಮಹಿಳೆಯರಿಗೂ ಆಯಸಿಡ್ ತಗುಲಿ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂತ್ರಸ್ತನ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. ಯುವತಿಯನ್ನು ಮಹಿಳೆಯರು ಹಿಡಿದು ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
बारात लेकर निकले दूल्हे पर प्रेमिका ने फेंका तेजाब
प्रेमिका को पकड़ कर घर वालों ने की धुनाई
मामला बलिया का है। pic.twitter.com/hz9NmtDqUe
— Priya singh (@priyarajputlive) April 24, 2024
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಬಲ್ಲಿಯಾ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿ ಮುನ್ನಾ ಲಾಲ್ ಯಾದವ್, ಸಂತ್ರಸ್ತ ತನಗೆ ಮೋಸ ಮಾಡಿ ಬೇರೊಬ್ಬಳ ಜೊತೆ ಮದುವೆ ಮಾಡಿಕೊಳ್ಳುತ್ತಿದ್ದಾನೆ ಎಂಬ ವಿಚಾರ ತಿಳಿದ ಯುವತಿ ಮಾರುವೇಷದಲ್ಲಿ ಬಂದು ಆತನ ಮುಖಕ್ಕೆ ಆಯಸಿಡ್ ಎರಚಿದ್ದಾಳೆ. ಯುವಕ ಹಾಗೂ ಯುವತಿ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದು, ಪರಸ್ಪರ ದೈಹಿಕ ಸಂಪರ್ಕವನ್ನು ಹೊಂದಿದ್ದರು ಎಂದು ತಿಳಿದುಬಂದಿದೆ. ಇಬ್ಬರ ಪ್ರೇಮಕ್ಕೆ ಎರಡು ಕಡೆಯ ಕುಟುಂಬಸ್ಥರು ವಿರೋಧಿಸಿದ ಕಾರಣ ಆತ ಈಕೆಯಿಂದ ಅಂತರ ಕಾಯ್ದುಕೊಂಡಿದ್ದ.
ಏಪ್ರಿಲ್ 22ರಂದು ತನ್ನ ಪ್ರಿಯಕರನಿಗೆ ಮದುವೆ ನಿಶ್ಚಯಿಸಿರುವ ವಿಚಾರ ತಿಳಿದ ಯುವತಿ ಆತನ ಮುಖಕ್ಕೆ ಆಯಸಿಡ್ ಎರಚಿದ್ದಾಳೆ. ಸ್ಥಳದಲ್ಲಿದ್ದವರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಯುವತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಂತ್ರಸ್ತನ ತಾಯಿ ನೀಡಿದ ದೂರಿನ ಮೇರೆಗೆ ಭಾರತ ದಂಡ ಸಂಹಿತೆ (IPC Section) 326ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಬಲ್ಲಿಯಾ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿ ಮುನ್ನಾ ಲಾಲ್ ಯಾದವ್ ತಿಳಿಸಿದ್ದಾರೆ.