Connect with us

LATEST NEWS

ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಹೊಟ್ಟೆಗೆ ಒದ್ದ ಆರೋಪಿ

ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಹೊಟ್ಟೆಗೆ ಒದ್ದ ಆರೋಪಿ

ಬೆಂಗಳೂರು ಜನವರಿ 7: ಕ್ಷುಲ್ಲಕ ಕಾರಣಕ್ಕೆ ಮಹಿಳೆಯೋರ್ವಳಿಗೆ ಒದ್ದು ಹಲ್ಲೆ ನಡೆಸಿ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಬಸವೇಶ್ವರನಗರದ ಸಿದ್ದಯ್ಯ ಪುರಾಣಿಕ್ ರಸ್ತೆಯಲ್ಲಿರುವ ಎಚ್‌.ಪಿ ಪೆಟ್ರೋಲ್ ಬಂಕ್‌ನಲ್ಲಿ ಈ ಘಟನೆ ನಡೆದಿದೆ. ಶೋಭಾ ಅವರೇ ಹಲ್ಲೆಗೊಳಗಾದ ಮಹಿಳೆಯಾಗಿದ್ದಾರೆ.

ಹಲ್ಲೆಗೊಳಗಾದ ಶೋಭ ಮತ್ತು ಹಲ್ಲೆ ಮಾಡಿದ ದಂಪತಿಗಳು ಪೆಟ್ರೊಲ್ ಹಾಕಲು ಪೆಟ್ರೊಲ್ ಹಾಕಲು ಬಂದಿದ್ದಾರೆ. ಹಲ್ಲೆ ಮಾಡಿದ ದಂಪತಿಯ ಸ್ಕೂಟರ್ ಶೋಭಾ ಅವರ ಸ್ಕೂಟರ್ ಗೆ ಡಿಕ್ಕಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಶೋಭಾ ಅವರು ಪ್ರಶ್ನಿಸಿದ್ದಕ್ಕೆ ದಂಪತಿ ಮೊದಲು ವಾಗ್ವಾದ ನಡೆಸಿದ್ದಾರೆ. ನಂತರ ಪರಿಸ್ಥಿತಿ ಕೈ ಮೀರಿ ಆರೋಪಿ ಒಂದು ಸಲ ಶೋಭಾ ಅವರ ಸ್ಕೂಟರ್‌ಗೆ ಒದಿದ್ದಾನೆ.

ಈ ಸಂದರ್ಭ ಬಂಕ್ ನೌಕರರು ಹಾಗೂ ಇತರೆ ವಾಹನಗಳ ಸವಾರರು ಮಧ್ಯಪ್ರವೇಶಿಸಿ ಆತನನ್ನು ಕಳುಹಿಸಲು ಮುಂದಾಗುತ್ತಾರೆ. ಸ್ಕೂಟರ್‌ನಲ್ಲಿ ಸ್ವಲ್ಪ ದೂರ ಸಾಗಿದ ಬಳಿಕ ದಂಪತಿ ಪುನಃ ಶೋಭಾ ಅವರ ಬಳಿ ಬಂದು ಗಲಾಟೆ ಮಾಡಿ. ಈ ಹಂತದಲ್ಲಿ ಆರೋಪಿ ಶೋಭಾ ಅವರ ಹೊಟ್ಟೆಗೆ ಒದ್ದು ಪತ್ನಿಯನ್ನು ಕರೆದುಕೊಂಡು ಹೋಗಿದ್ದಾನೆ. ಪೆಟ್ರೋಲ್ ಪಂಪ್ ನಲ್ಲಿದ್ದ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಈ ಎಲ್ಲಾ ವಿದ್ಯಮಾನ ಸೆರೆಯಾಗಿದ್ದು, ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

VIDEO

Facebook Comments

comments