Connect with us

MANGALORE

ಸಿಸಿಬಿ ಕಾರ್ಯಾಚರಣೆ ರಾಕೇಶ್ ಕೊಲೆ ಪ್ರಕರಣದ ಆರೋಪಿಗಳ ಸೆರೆ

ಸಿಸಿಬಿ ಕಾರ್ಯಾಚರಣೆ ರಾಕೇಶ್ ಕೊಲೆ ಪ್ರಕರಣದ ಆರೋಪಿಗಳ ಸೆರೆ

ಮಂಗಳೂರು ಜನವರಿ 6: ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಂಜಿಮೊಗರು ಬಳಿಯಲ್ಲಿ ರಾಕೇಶ್ ಎಂಬಾತನ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ನಗರ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

2018 ಜನವರಿಯಲ್ಲಿ ಮಂಗಳೂರು ನಗರ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಂಜಿಮೊಗೆರು ಬಳಿಯ ಮಾಲಾಡಿ ಎಂಬಲ್ಲಿ ಕ್ಷುಲಕ ಕಾರಣದ ನೆಪವೊಡ್ಡಿ ಪಂಜಿಮೊಗರು ಉರುಂಡಾಡಿ ಬೈಲು ನಿವಾಸಿ ಯೋಗೀಶ್ ಎಂಬವರ ಮಗನಾದ ರಾಕೇಶ್ ಎಂಬಾತನನ್ನು 3 ಮಂದಿ ತಲವಾರಿನಿಂದ ಕಡಿದು ಕೊಲೆ ಮಾಡಿದ್ದರು. ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆದಿತ್ತು.

ಬಂಧಿತ ಆರೋಪಿಗಳನ್ನು ಸುನಿಲ್ ಕಮಾರ್, ಪ್ರವೀಣ್ ಪೂಜಾರಿ, ಪ್ರೀತಂ ಎಂಬವರನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಆರೋಪಿಗಳು ರಾಕೇಶ್ ಎಂಬಾತನ ಕೊಲೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದರು. ಆರೋಪಿಗಳು ಹಾಗೂ ಹತ್ಯೆಯಾದ ರಾಕೇಶ್ ಎಂಬವರು ಸ್ನೇಹಿತರಾಗಿದ್ದರು.

Facebook Comments

comments