BELTHANGADI
ಅಷ್ಟಮಂಗಲ ಪ್ರಶ್ನೆಯಂತೆ ವಿಸರ್ಜಿಸಿದ್ದ ದೇವರಮೂರ್ತಿ ಮರಳಿ ದೇವಸ್ಥಾನಕ್ಕೆ
ಬೆಳ್ತಂಗಡಿ, ಡಿಸೆಂಬರ್ 20: ಉಜಿರೆ ಗ್ರಾಮದ ಪೆರ್ಲದ ಲಕ್ಷ್ಮೀ ಜನಾರ್ದನ ದೇವಸ್ಥಾನದ ನವೀಕರಣಕ್ಕಾಗಿ ಕಳೆದ ವರ್ಷ ನದಿಯಲ್ಲಿ ವಿಸರ್ಜಿಸಲಾಗಿದ್ದ ದೇವರ ಮೂರ್ತಿಯನ್ನು ದೈವಜ್ಞರ ಆಜ್ಞೆಯಂತೆ ಮತ್ತೆ ಹುಡುಕಿ ದೇವಸ್ಥಾನಕ್ಕೆ ತರಲಾಗಿದೆ.
ಅಷ್ಟಮಂಗಲ ಪ್ರಶ್ನೆಯಂತೆ ದೇವಸ್ಥಾನದಲ್ಲಿ ಪೂಜಿಸಿದ್ದ ಲಕ್ಷ್ಮಿ ಜನಾರ್ದನ ದೇವರ ಮೂರ್ತಿಯನ್ನು ಕಳೆದ ಡಿಸೆಂಬರ್‌ನಲ್ಲಿ ನಿಡಿಗಲ್ ನೇತ್ರಾವತಿ ನದಿಯಲ್ಲಿ ವಿಸರ್ಜಿಸಿ, ಬಾಲಾಲಯದಲ್ಲಿ ಬೇರೊಂದು ಮೂರ್ತಿಯನ್ನು ಸ್ಥಾಪಿಸಲಾಗಿತ್ತು. ಉಜಿರೆ: ಅಷ್ಟಮಂಗಲ ಪ್ರಶ್ನೆಯಲ್ಲಿ ಇದ್ದಂತೆ ಪತ್ತೆಯಾಯಿತು ಪುರಾತನ ಶಿವಲಿಂಗ
ಪೆರ್ಲದಲ್ಲಿ ಕಳೆದ ಡಿ.8 ಮತ್ತು 9 ಹಾಗೂ 15 ಮತ್ತು 16ರಂದು ದೈವಜ್ಞರಾದ ನೆಲ್ಯಾಡಿಯ ಶ್ರೀಧರ ಗೋರೆ ಅವರ ನೇತೃತ್ವದಲ್ಲಿ ಮತ್ತೆ ಅಷ್ಟಮಂಗಲ ಪ್ರಶ್ನೆ ನಡೆದಿದೆ. ಈ ವೇಳೆ ಅವರು ತಿಳಿಸಿದಂತೆ ಮೊದಲು ಪೂಜಿಸಿದ ಮೂರ್ತಿಯನ್ನೇ ಪ್ರತಿಷ್ಠಾಪನೆ ಮಾಡಬೇಕು ಎಂದು ತಿಳಿಸಿ ಡಿ.18ರಂದು ಹುಡುಕಿದರೆ ವಿಸರ್ಜನೆ ಮಾಡಿದ ಪರಿಸರದಲ್ಲಿ ಮೂರ್ತಿ ಸಿಗುತ್ತದೆ ಎಂದು ಹೇಳಿದ್ದರು. ಆ ಪ್ರಕಾರ ಹುಡುಕಿದಾಗ ಅದೇ ಮೂರ್ತಿ ನಿಡಿಗಲ್ ಕಿಂಡಿ ಅಣೆಕಟ್ಟಿನ ಸಮೀಪ ಪತ್ತೆಯಾಗಿದೆ. ಇದೇ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಈಚೆಗೆ ಅವರು ತಿಳಿಸಿದಂತೆ ದೇವಸ್ಥಾನದ ಪರಿಸರ ಅಗೆದಾಗ ಮಣ್ಣಿನಡಿಯಲ್ಲಿ ಪುರಾತನ ಶಿವಲಿಂಗ ಕೂಡ ಪತ್ತೆಯಾಗಿದೆ.
ನಿಡಿಗಲ್ ನದಿಯಲ್ಲಿ ಸಿಕ್ಕಿರುವ ಮೂರ್ತಿಯನ್ನು ದೇಗುಲಕ್ಕೆ ಕೊಂಡೊಯ್ಯಲಾಗಿದೆ. ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಉಜಿರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರವಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ಮೊಕ್ತೇಸರ ಹಾಗೂ ಕಾರ್ಯದರ್ಶಿ ಕೃಷ್ಣ ಒಪ್ಪಂತ್ತಾಯರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ.
You must be logged in to post a comment Login