BELTHANGADI
ಉಜಿರೆ: ಅಷ್ಟಮಂಗಲ ಪ್ರಶ್ನೆಯಲ್ಲಿ ಇದ್ದಂತೆ ಪತ್ತೆಯಾಯಿತು ಪುರಾತನ ಶಿವಲಿಂಗ
ಬೆಳ್ತಂಗಡಿ, ಡಿಸೆಂಬರ್ 16: ತಾಲೂಕಿನ ಉಜಿರೆ ಸಮೀಪದ ಪೆರ್ಲ ಎಂಬಲ್ಲಿ ಸಾವಿರ ವರ್ಷದ ಹಿಂದೆ ಆರಾಧಿಸಲ್ಪಡುತ್ತಿದ್ದ ಪುರಾತನ ಶಿವಲಿಂಗ ಮಣ್ಣಿನಡಿ ಪತ್ತೆಯಾಗಿದೆ.
ಸುಮಾರು 1 ಸಾವಿರ ವರ್ಷದ ಹಿಂದೆ ಆರಾಧಿಸಲ್ಪಡುತ್ತಿದ್ದ ಶಿವಲಿಂಗ ಇದಾಗಿದ್ದು, ಬಳಿಕ ಯಾವುದೇ ಆರಾಧನೆಯಿಲ್ಲದೆ ಪಾಳುಬಿದ್ದಿದ್ದ ದೇವಸ್ಥಾನವಾಗಿದೆ. ಪೂಜೆಯಿಲ್ಲದೆ ಇದ್ದ ದೇವಸ್ಥಾನದಿಂದ ಗ್ರಾಮಸ್ಥರಿಗೆ ಸಮಸ್ಯೆ ಎದುರಾಗಿತ್ತು, ಆನಾರೋಗ್ಯ ಮತ್ತು ಇತರ ಸಮಸ್ಯೆಗಳಿಂದ ಕಂಗೆಟ್ಟಿದ್ದ ಗ್ರಾಮದ ಜನರು ಇತ್ತೀಚೆಗೆ ಕ್ಷೇತ್ರದ ಪುನರುಜ್ಜೀವನಕ್ಕೆ ಗ್ರಾಮಸ್ಥರು ಮನಸ್ಸು ಮಾಡಿದ್ದರು.
ದೈವಜ್ಞರ ಮೂಲಕ ಅಷ್ಟಮಂಗಲ ಪ್ರಶ್ನೆ ಇಟ್ಟಿದ್ದ ಗ್ರಾಮಸ್ಥರಿಗೆ ಅಷ್ಟಮಂಗಲ ಪ್ರಶ್ನೆಯಲ್ಲಿ ಶಿವಲಿಂಗದ ರಹಸ್ಯ ಕಂಡು ಬಂತು, ಮಣ್ಣಿನಡಿ ಶಿವಲಿಂಗ ಹುದುಗಿರುವ ವಿಚಾರ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದ ಹಿನ್ನಲೆ, ಪ್ರಶ್ನೆಯಲ್ಲಿ ಹೇಳಿದಂತೆ ಪಾಳುಬಿದ್ದ ದೇವಸ್ಥಾನದ ಪಕ್ಕದಲ್ಲಿ ಶಿವಲಿಂಗ ಮಣ್ಣಿನಡಿ ಪತ್ತೆಯಾಗಿದೆ.