Connect with us

    FILM

    ಪ್ಲಾಸ್ಟಿಕ್ ಸರ್ಜರಿ ತಂದ ಸಂಕಷ್ಟ – ಅರ್ಜೆಂಟೀನಾ ಮಾಡೆಲ್ ದುರಂತ ಸಾವು…!!

    ಅರ್ಜೆಂಟೀನಾ ಸೆಪ್ಟೆಂಬರ್ 02: ಪ್ಲಾಸ್ಟಿಕ್ ಸರ್ಜರಿ ತಂದ ಎಡವಟ್ಟಿಗೆ ಅರ್ಜೆಂಟೀನಾದ ನಟಿ ಮತ್ತು ಮಾಜಿ ಮಾಡೆಲ್ ಸಿಲ್ವಿನಾ ಲೂನಾ ಪ್ರಾಣ ತೆತ್ತಿದ್ದಾರೆ.


    2011 ರಲ್ಲಿ ನಡೆಸಿದ ಬ್ರೆಜಿಲಿಯನ್ ಬಟ್ ಲಿಫ್ಟ್ ಪ್ರಕ್ರಿಯೆಯ ಪರಿಣಾಮವಾಗಿ ಮೂತ್ರಪಿಂಡದ ತೊಂದರೆಗಳಿಂದಾಗಿ ಆಸ್ಪತ್ರೆಯಲ್ಲಿ 79 ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. 43 ವರ್ಷ ವಯಸ್ಸಿನ ಅರ್ಜೆಂಟೀನಾದ ನಟಿ ಸಿಲ್ವಿನಾ ಲೂನಾ ಗುರುವಾರ, ಆಗಸ್ಟ್ 31 ರಂದು ನಿಧನರಾದರು.


    ನಟಿ ಸಿಲ್ವಿನಾ ಕಳೆದ ಜೂನ್ 13 ರಂದೇ ಆಸ್ಪತ್ರೆಗೆ ದಾಖಲಾಗಿದ್ದರು. ನಿರಂತರ ಚಿಕಿತ್ಸೆಯ ಬಳಿಕವೂ ನಟಿ ಗುಣಮುಖರಾಗದೇ ಮೃತಪಟ್ಟಿದ್ದಾರೆ. ಅರ್ಜೆಂಟೀನಾ ನಟಿಯ ನಿಧನಕ್ಕೆ ಸ್ನೇಹಿತರು, ಸಿನಿಮಾ ತಂಡದವರು ಕಂಬನಿ ಮಿಡಿದಿದ್ದಾರೆ. ಮೃತ ಸಿಲ್ವಿನಾ ಲೂನಾ ಸ್ನೇಹಿತ ಪತ್ರಕರ್ತ ಏಂಜೆಲ್ ಡಿ ಬ್ರಿಟೊ ಅವರು ಲೂನಾ ಅವರೊಂದಿಗೆ ಸುಮಾರು 20 ವರ್ಷಗಳ ಕಾಲ ಕೆಲಸ ಮಾಡಿದ್ದೆ. ಸಿಲ್ವಿನಾ ಅವರ ಜೊತೆ ಕಾಲ ಕಳೆದ ಪ್ರತಿಯೊಂದು ಸಮಯವೂ ಸಂತಸದಿಂದ ಕೂಡಿತ್ತು ಎಂದು ಹೇಳಿಕೊಂಡಿದ್ದಾರೆ. ಮಿಯಾಮಿಯ ಜಾಕಿ ಗ್ಲೀಸನ್ ಥಿಯೇಟರ್‌ನಲ್ಲಿ 2004 ರ MTV ವಿಡಿಯೋ ಮ್ಯೂಸಿಕ್ ಅವಾರ್ಡ್ಸ್ ಲ್ಯಾಟಿನ್ ಅಮೇರಿಕಾದಲ್ಲಿ ಸಿಲ್ವಿನಾ ಲೂನಾ ಪ್ರೆಸ್ ರೂಮ್‌ನಲ್ಲಿ ತೆರೆಮರೆಯಲ್ಲಿ ಕಾಣಿಸಿಕೊಂಡಿದ್ದರು

    Share Information
    Advertisement
    Click to comment

    You must be logged in to post a comment Login

    Leave a Reply