BANTWAL
ಅಡಿಕೆ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷಮಂಚಿ ಶ್ರೀನಿವಾಸ ಆಚಾರ್ ನಿಧನ

ಅಡಿಕೆ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷಮಂಚಿ ಶ್ರೀನಿವಾಸ ಆಚಾರ್ ನಿಧನ
ಬಂಟ್ವಾಳ ತಾಲೂಕಿನ ಪ್ರತಿಷ್ಠಿತ ಮಂಕುಡೆ ಮನೆತನದ ಮಂಚಿ ಶ್ರೀನಿವಾಸ ಆಚಾರ್ (74) ಶನಿವಾರ ನಿಧನರಾದರು.
ಅವರು ಕೃಷಿ ಮಾಸಿಕ ಅಡಿಕೆ ಪತ್ರಿಕೆಯ ಪ್ರಕಾಶಕ ಹಾಗೂ ಸಂಪಾದಕರಾಗಿದ್ದರು.

ಪುತ್ತೂರಿನಲ್ಲಿ ಕಚೇರಿ ಹೊಂದಿರುವ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿದ್ದರು.
ಕಳೆದ ಮೂರು ದಶಕಗಳಿಂದ ಅವರು ಅಡಿಕೆ ಸಮುದಾಯದ ಹಿತಾಸಕ್ತಿ ರಕ್ಷಣೆಗಾಗಿ, ಅಡಿಕೆ ಪತ್ರಿಕೆಯ ನಿರ್ವಹಣೆಗಾಗಿ ತಮ್ಮ ಗಣನೀಯ ಕೊಡುಗೆ ಕೊಡುತ್ತಾ ಬಂದಿದ್ದಾರೆ.
ಮಂಗಳೂರಿನ ಯೆಯ್ಯಾಡಿಯಲ್ಲಿ ಆಚಾರ್ ಉದ್ಯಮವನ್ನು ನಡೆಸುತ್ತಿದ್ದರು.
ಪುತ್ತೂರಿನಲ್ಲಿ ಕ್ಯಾಂಪ್ಕೋ ವತಿಯಿಂದ ಜರುಗಿದ ಯಂತ್ರಮೇಳಗಳಲ್ಲಿ ಸಕ್ರಿಯವಾಗಿದ್ದರು.
ದಕ್ಷಿಣ ಕನ್ನಡದ ಎಲ್ಲಾ ಕೃಷಿ ಸಂಸ್ಥೆಗಳಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದರು.
ಶ್ರೀನಿವಾಸ ಆಚಾರ್ ಅವರು ಪತ್ನಿ ಇಂದಿರಾ, ಇಬ್ಬರು ಮಕ್ಕಳು ಹಾಗೂ ಅಪಾರ ಅಪ್ತೇಷ್ಟರನ್ನು ಅಗಲಿದ್ದಾರೆ.
ಅಗಲಿದ ಆಚಾರ್ ಅವರಿಗೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಕಂಬನಿ ವ್ಯಕ್ತಪಡಿಸಿದೆ. ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಉಪಾಧ್ಯಕ್ಷ ಶಂ.ನಾ.ಖಂಡಿಗೆ ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.