FILM
ಖ್ಯಾತ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಪುತ್ರಿಗೆ ನಿನ್ನ ರೇಟ್ ಎಷ್ಟು ಎಂದು ಮೆಸೇಜ್…!!

ಮುಂಬೈ : ಖ್ಯಾತ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಪುತ್ರಿ ಆಲಿಯಾ ಕಶ್ಯಪ್ ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಕಮೆಂಟ್ ಗಳ ಕಾಟ ಜಾಸ್ತಿಯಾಗಿದೆಯಂತೆ. ಹಿಳೆಯರ ಒಳಉಡುಪಿನ ಜಾಹೀರಾತಿನಲ್ಲಿ ಅವರು ಕಾಣಿಸಿಕೊಂಡ ನಂತರ ಆನ್‌ಲೈನ್‌ನಲ್ಲಿ ಮನಬಂದಂತೆ ಟ್ರೋಲ್ ಮಾಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಖ್ಯಾತ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಪುತ್ರಿ 20 ಹರೆಯದ ಆಲಿಯಾ ಕಶ್ಯಪ್ ತಮಗೆ ಆದ ಕಹಿ ಘಟನೆಯ ಬಗ್ಗೆ ಯೂಟ್ಯೂಬ್ ಚಾನೆಲ್ ನಲ್ಲಿ ಹೇಳಿಕೊಂಡಿದ್ದಾರೆ. ಭಾರತೀಯ ಯುವತಿಯಾಗಿ ಇಂಥ ಜಾಹೀರಾತಿನಲ್ಲಿ ನಟಿಸಲು ನಾಚಿಕೆ ಆಗುವುದಿಲ್ಲವೇ ಎಂದು ಅನೇಕರು ಆಲಿಯಾರನ್ನು ಟೀಕಿಸಿದ್ದರು. ಅಷ್ಟೇ ಆಗಿದ್ದರೆ ಆಲಿಯಾ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಕೆಲವರು ತೀರಾ ಅತಿರೇಕದ ಕಾಮೆಂಟ್‌ಗಳನ್ನು ಮಾಡಿದ್ದರು. ವೇಶ್ಯೆ ಎಂದೆಲ್ಲ ಹೀಯಾಳಿಸಿದ್ದರು!

ನಾನು ತುಂಬ ಸೂಕ್ಷ್ಮ ವ್ಯಕ್ತಿ. ಚಿಕ್ಕ ವಿಷಯ ಕೂಡ ನನ್ನ ಮೇಲೆ ಪರಿಣಾಮ ಬೀರುತ್ತದೆ. ಕೆಟ್ಟ ಕಾಮೆಂಟ್‌ಗಳ ಕಾರಣದಿಂದ ನಾನು ಪ್ರತಿ ದಿನ ಅಳುತ್ತಿದ್ದೆ. ಭಾರತೀಯಳಾಗಿ ನಿನಗೆ ನಾಚಿಕೆ ಆಗಲ್ವಾ ಎಂದು ಜನರು ಕೇಳುತ್ತಿದ್ದರು. ಕೊಲೆ ಮತ್ತು ರೇಪ್ ಬೆದರಿಕೆ ಹಾಕಿದರು. ನನ್ನನ್ನು ವೇಶ್ಯೆ ಎಂದು ಕರೆದಿದ್ದು ಮಾತ್ರವಲ್ಲದೆ ನಿನ್ನ ರೇಟ್ ಎಷ್ಟು ಎಂದು ಕೂಡ ಅನೇಕರು ಮೆಸೇಜ್ ಮಾಡಿದ್ದರು. ಆ ಘಟನೆಯಿಂದ ನಾನು ತುಂಬ ವಿಚಲಿತಳಾದೆ’ ಎಂದಿದ್ದಾರೆ ಆಲಿಯಾ.
ಆದರೆ ಈಗ ಆಲಿಯಾ ಮನಸ್ಸು ಗಟ್ಟಿ ಮಾಡಿಕೊಂಡಿದ್ದಾರೆ. ಅನಾಮದೇಯ ವ್ಯಕ್ತಿಗಳ ಕಾಮೆಂಟ್‌ಗೆ ತಲೆ ಕೆಡಿಸಿಕೊಳ್ಳಬಾರದು ಎಂದು ಅವರು ತೀರ್ಮಾನಿಸಿದ್ದಾರೆ. ‘ಎಲ್ಲೋ ಮರೆಯಲ್ಲಿ ಕುಳಿತು ಕೆಟ್ಟ ಕಾಮೆಂಟ್ ಮಾಡುವವರನ್ನು ನಾನು ಬ್ಲಾಕ್ ಮಾಡುತ್ತೇನೆ. ಸೋಶಿಯಲ್ ಮೀಡಿಯಾದಲ್ಲಿ ಕೇವಲ ಪಾಸಿಟಿವ್ ವಿಚಾರಗಳು ಇರಲಿ ಎಂದು ನಾನು ಬಯಸುತ್ತೇನೆ’ ಎಂದು ಹೇಳಿರುವ ಆಲಿಯಾ, ತಮಗೆ ಬಾಲಿವುಡ್‌ಗೆ ಬರುವ ಆಸಕ್ತಿ ಇಲ್ಲ ಎಂಬುದನ್ನು ಕೂಡ ಸ್ಪಷ್ಟಪಡಿಸಿದ್ದಾರೆ.